ಕಾವೇರಿ-ವಗೈ-ಗುಂಡಾರ ಜೋಡಣಾ ಕಾಲುವೆಯ ವಿಚಾರಣೆ 6 ವಾರಗಳ ಕಾಲ ಮುಂದೂಡಿದ ಸುಪ್ರೀಂಕೋರ್ಟ್.

kannada t-shirts

ಬೆಂಗಳೂರು,ನವೆಂಬರ್,15,2021(www.justkannada.in): ತಮಿಳುನಾಡು ಸರ್ಕಾರವು ತಮಿಳುನಾಡಿನ ಪುದುಕೋಟ್ಟಯಿ ಜಿಲ್ಲೆಯ ಕುಣತ್ತೂರುವಿನಲ್ಲಿ ನಿರ್ಮಿಸುತ್ತಿರುವ ಕಾವೇರಿ-ವಗೈ-ಗುಂಡಾರ ಜೋಡಣಾ ಕಾಲುವೆಯ (LINK CANAL) ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು  ಸುಪ್ರೀಂಕೋರ್ಟ್ ನಲ್ಲಿ ದಾಖಲಿಸಿರುವ ಮೂಲದಾವೆ (Original Suit)  ವಿಚಾರಣೆಗೆ ಕೈಗೆತ್ತಿಕೊಂಡು ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಮನವಿ ಮೇರೆಗೆ 6 ವಾರ ಮುಂದೂಡಿತು.

ಕರ್ನಾಟಕದ ಮೂಲ ದಾವೆಯ ಕುರಿತು ಈ ರಾಜ್ಯಗಳು ತಮ್ಮ ಪ್ರತಿಕ್ರಿಯೆಯನ್ನು 6 ವಾರಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಬೇಕೆಂದು ಸೂಚಿಸಿತು.

ತಮಿಳುನಾಡಿನ ಕರೂರ ಜಿಲ್ಲೆಯಲ್ಲಿ ಕಟ್ಟಲಾಗಿರುವ ಮಾಯನೂರು ಜಲಾಶಯದಿಂದ ಕಾವೇರಿಯ ಹೆಚ್ಚುವರಿ ನೀರನ್ನು ಗುಂಡಾರಕ್ಕೆ ಕಾಲುವೆಗಳ ಮೂಲಕ ವರ್ಗಾಯಿಸಲು ತಮಿಳುನಾಡು ಯೋಜಿಸಿದೆ.  ೨೬೨ ಕಿ.ಮಿ. ಉದ್ದದ ಈ ಕಾಲುವೆ  ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ   ಫೆಬ್ರುವರಿ-2021 ರಲ್ಲಿ ಅರ್ಜಿ ಸಲ್ಲಿಸಿತ್ತು.

ಕಾವೇರಿ ನ್ಯಾಯಾಧೀಕರಣವು (Cauvery water disputes Tribunal) ತಮಿಳನಾಡಿಗೆ ಹಂಚಿಕೆ ಮಾಡಿರುವ ೧೭೭.೨೫ ಟಿ.ಎಮ್.ಸಿ ಅಡಿ ನೀರನ್ನು ಬಿಳಿ ಗುಂಡ್ಲುವಿನ ಅಂತರ ರಾಜ್ಯ ಮಾಪನ ಕೇಂದ್ರದಲ್ಲಿ  ನಿಶ್ಚಿತಗೊಳಿಸಿದ ಮೇಲೆ ಒಂದು ಸರಾಸರಿ ವರ್ಷದಲ್ಲಿ ಬಾಕಿ ಉಳಿದ ನೀರು ಕರ್ನಾಟಕಕ್ಕೆ ಸೇರಿದ್ದಾಗಿರುತ್ತದೆ, ಅದರಲ್ಲಿ ಕರ್ನಾಟಕದ ಪಾಲಿನ ೨೮೪.೭೫ ಟಿ.ಎಮ್.ಸಿ ಅಡಿ ನೀರು ಮತ್ತು ಕಾವೇರಿಯಲ್ಲಿ ಲಭ್ಯವಾಗಬಹುದಾದ ಹೆಚ್ಚುವರಿ ನೀರು ಕರ್ನಾಟಕಕ್ಕೆ ಸೇರಿದೆಯೆಂಬುದು ನಿಲುವಾಗಿದೆಂದು ಕರ್ನಾಟಕ ವಾದಿಸಿದೆ. ಈ ವಾದವು ೧೬-೦೨-೨೦೧೮ರಂದು ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ಅಡಿಯಲ್ಲಿ ಈ ನಿಲುವು ತಳೆಯಲಾಗಿದೆ. ಕುಡಿಯುವ ನೀರು ಒದಗಿಸಲು ಕರ್ನಾಟಕವು ಮೇಕೆದಾಟು ಬಳಿ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯವನ್ನು ತಮಿಳನಾಡು ವಿರೋದಿಸುತ್ತಿದೆ ಎಂದು  ಜಲಸಂಪನ್ಮೂಲ ಸಚಿವರ ವಿಶೇಷ ಕರ್ತವ್ಯಾಧಿಕಾರಿ (ಮಾಧ್ಯಮ) ಲಕ್ಷ್ಮೀಕಾಂತ ಜೋಶಿ ತಿಳಿಸಿದ್ದಾರೆ.

Key words: Supreme Court- postpones -hearing -Cauvery-Vagai-Gundara- canal

website developers in mysore