ಸ್ಪೀಕರ್ ಆದೇಶ ಎತ್ತಿ ಹಿಡಿಯರಿ: ಮಧ್ಯಂತರ ಆದೇಶ ಕೊಡಲೇಬೇಡಿ – ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದ…

ನವದೆಹಲಿ,ಸೆ,26,2019(www.justkannada.in):  ಸ್ಪೀಕರ್ ಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅವಕಾಶವಿದೆ. ಸ್ಪೀಕರ್ ಸಂವಿಧಾನದ ಅಥಾರಿಟಿ.  ವಿಚಾರಣೆಗೆ ಟೈಮ್ ಫಿಕ್ಸ್ ಮಾಡಿದರೂ ಅನರ್ಹರು ವಿಚಾರಣೆಗೆ ಹಾಜರಾಗದೇ ಮುಂಬೈಗೆ ಓಡಿ ಹೋಗಿದ್ದಾರೆ. ಹೀಗಾಗಿ ಸ್ಪೀಕರ್ ಎಲ್ಲರನ್ನೂ ಅನರ್ಹಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.

ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿದ್ದು ಇಂದು ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ನಿನ್ನೆ ಅನರ್ಹ ಶಾಸಕರ ಪರ ಮುಕುಲ್ ರೊಹ್ಟಗಿ ವಾದ ಮಂಡಿಸಿದರು.

ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು ಹೀಗೆ….

ರಾಜೀನಾಮೆ ಕೊಟ್ಟವರಿಗೆ ವಿಚಾರಣೆಗೆ ಹಾಜರಾಗಲು ಸ್ಪೀಕರ್ ಟೈಮ್ ಫಿಕ್ಸ್ ಮಾಡಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಲಿಲ್ಲ. ರಾಜೀನಾಮೆ ಕೊಟ್ಟವರು ರಾಜ್ಯಪಾಲರ ಬಳಿ ಹೋಗಿದ್ದರು. ಸ್ಪೆಷಲ್ ವಿಮಾನದ ಮೂಲಕ ಮುಂಬೈಗೆ ಹೋಗಿದ್ದರು. ಗುಂಪಿನಲ್ಲಿ ಬಂದು ಒಟ್ಟಾಗಿ ರಾಜೀನಾಮೆ ಕೊಟ್ಟಿದ್ದಾರೆ. ಗುಂಪಾಗಿ ಬಂದು ರಾಜೀನಾಮೆ ಕೊಟ್ಟಿರುವ ಹಿಂದಿರುವ ಉದ್ದೇಶ ಮುಖ್ಯ. ಹೀಗಾಗಿ  ಸ್ವಯಂಪ್ರೇರಿತವಾಗಿ ರಾಜೀನಾಮೆ ಕೊಟ್ಟಿಲ್ಲ ಎಂದೆನಿಸಿದೆ.

ಹೇಗೆ ಬೇಕೋ ಹಾಗೆ ರಾಜೀನಾಮೆ ಕೊಡಲು ಆಗುವುದಿಲ್ಲ. ನೇರವಾಗಿ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಬೇಕು. ಆದರೆ ಅನರ್ಹ ಶಾಸಕರು ನಿಯಮ ಉಲ್ಲಂಘಿಸಿ ಮನಬಂದಂತೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಲು ಕೆಲವು ನಿಯಮಗಳಿವೆ. ಪ್ರಾಥಮಿಕವಾಗಿ ಅವುಗಳನ್ನ ಪಾಲಿಸಬೇಕು. ಶಾಸಕರು ಸ್ಪೀಕರ್ ಭೇಟಿಗೆ ಸಮಯವನ್ನು ಕೂಡ ಕೇಳಿಲ್ಲ. ಅಪಾಯಟ್ ಮೆಂಟ್ ಕೂಡ ಪಡೆದಿಲ್ಲ. ಆದರೆ ರಾಜೀನಾಮೆ ಸ್ವೀಕರಿಸಲಿಲ್ಲ ಅಂತಾ ಸುಪ್ರೀಂಕೋರ್ಟ್ ಗೆ ಬಂದಿದ್ದಾರೆ.

ಸ್ಪೀಕರ್ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅವಕಾಶವಿದೆ. ಸ್ಪೀಕರ್ ಸಂವಿಧಾನದ ಆಥಾರಿಟಿ. ಹೀಗಾಗಿ ಸ್ಪೀಕರ್ ಎಲ್ಲರನ್ನೂ ಅನರ್ಹಗೊಳಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ಸ್ಪೀಕರ್  ಮೂರು ದಿನ ಅವಕಾಶ ಕೊಟ್ಟಿದ್ದರು. ಆದರೆ ಅನರ್ಹ ಶಾಸಕರು ವಿಚಾರಣೆಗೆ ಹಾಜರಾಗಿಲ್ಲ. ಸ್ಪೀಕರ್ ಎಲ್ಲವನ್ನೂ ಪರಿಶೀಲಿಸಿ ಅನರ್ಹಗೊಳಿಸಿದ್ದಾರೆ. ಅನರ್ಹ ಪರ ವಕೀಲರು ಕೋರ್ಟ್ ದಾರಿ ತಪ್ಪಿಸುತ್ತಿದ್ದಾರೆ. ನಿಜವಾಗಿಯೂ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರಾ..?  ಸರ್ಕಾರದ ಮೇಲೆ ಅಸಮಾಧಾನವಿತ್ತ. ಅಥವಾ ಬೇರೆ ವಿಷಯವಿತ್ತಾ..? ಸ್ಪೀಕರ್ ಆದೇಶವನ್ನ ಹೇಗೆ ಬೇಕೋ ಆಗೆ ಪ್ರಶ್ನಿಸೋಕೆ ಆಗಲ್ಲ.  ಆರ್ಟಿಕಲ್ 226ರಲ್ಲಿ ಸ್ಪೀಕರ್ ಆದೇಶ ಪ್ರಶ್ನಿಸಬಹುದು.

ರಾಜೀನಾಮೆ ಕೊಟ್ಟವರು ಮಹಾರಾಷ್ಟ್ರಗೆ ಹೋಗಿದ್ರು. ಸುಪ್ರೀಕೋರ್ಟ್ ಗೆ ಅರ್ಜಿ ಹಾಕ್ತಾರೆ. ಆದರೆ ಬೆಂಗಳೂರಿಗೆ ಬರಲ್ಲ. ಇದನ್ನೆಲ್ಲಾ ಸ್ಪೀಕರ್ ಏನೆಂದು ನಿರ್ಧರಿಬೇಕು. ಸುಪ್ರೀಂಕೋರ್ಟ್ ನೆರವು ಪಡೆಯುವ ತಂತ್ರ ಮಾಡ್ತಾರೆ. ಕೋರ್ಟ್ ಗ್ರೌಂಡ್ ರಿಯಾಲಿಟಿ ಅರ್ಥ ಮಾಡಿಕೊಳ್ಳಬೇಕು.

ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ ಅಂತಾರೆ. ಚುನಾವಣೆ ಬಗ್ಗೆ ಯಾವುದೇ ಮಧ್ಯಂತರದ ಆದೇಶದ ಅವಶ್ಯಕತೆ ಇಲ್ಲ. ಇಂತಹ ಪ್ರಕರಣದಲ್ಲಿ ಮಧ್ಯಂತರ ಆದೇಶ ಕೊಡಬಾರದು.  ಚುನಾವಣಾ ಆಯೋಗ ಅವರನ್ನ ಅನರ್ಹತೆ ಮಾಡಿಲ್ಲ. ಕೋರ್ಟ್ ಗೆ ಬಂದು ಅವರು ಸ್ಪರ್ಧೆ ಮಾಡಬಹುದು ಅಂತಾ ಆಯೋಗ ಹೇಳುತ್ತೆ. ಇದು ಸರಿಯಲ್ಲ. ಚುನಾವಣೆ ನಡೆಸೋದು ಚುನಾವಣಾ ಆಯೋಗದ ಕೆಲಸ.

ರಾಜೀನಾಮೆ ಎಲ್ಲರೂ ಒಟ್ಟಾಗಿ ತೆಗೆದುಕೊಂಡ ನಿರ್ಧಾರ. ಕ್ಷೇತ್ರದ ಜನತೆಯನ್ನ ಕೇಳಿ ಅವರೇನು ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರವನ್ನ ಬೀಳಿಸಲು ತೆಗೆದುಕೊಂಡ ನಿರ್ಧಾರ.

ರಾಜ್ಯ ಬಿಜೆಪಿ ನಾಯಕರು ಅವರ ಜತೆ ಕಾಣಿಸಿಕೊಂಡಿದ್ದಾರೆ. ಮಹರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಸಹಕಾರ ಸಿಕ್ಕಿದೆ.  ಶಾಸಕರಿಗೆ ಮಂತ್ರಿ ಸ್ಥಾನ ಆಮಿಷ ಒಡ್ಡಲಾಗಿದೆ. ಹಣಕಾಸಿನ ಆಮಿಷವನ್ನೂ ಒಡ್ಡಲಾಗಿದೆ.  ಬಿಎಸ್ ವೈ ಆಪ್ತ ಸಂತೋಷ್, ಅಶ್ವತ್ ನಾರಾಯಣ್ ಅನರ್ಹರ ಜತೆಗಿದ್ದರು. ಈಗ ಅಶ್ವಥ್ ನಾರಾಯಣ್ ಉಪಮುಖ್ಯಮಂತ್ರಿಯಾಗಿದ್ದಾರೆ. ಇದೆಲ್ಲಾ ಸರ್ಕಾರ ಬೀಳಿಸುವ ಷಡ್ಯಂತ್ರ ಎಂದು ಎದ್ದು ಕಾಣುತ್ತಿದೆ.

ರಮೇಶ್ ಜಾರಕಿಹೊಳಿ ಎಸ್.ಎಂ ಕೃಷ್ಣರನ್ನ ಭೇಟಿಯಾಗಿದ್ದಾರೆ. ಇದನೆಲ್ಲಾ ಅನರ್ಹ ಶಾಸಕರ ಪರವಕೀಲರು ಮರೆಮಾಚುವುದು ಬೇಡ. ರಾಜೀನಾಮೆ ನೀಡಿದವರು ಕಾಂಗ್ರೆಸ್ ಸಭೆಗಳಿಗೆ ಹೋಗಬೇಕಿತ್ತು. ನಾವಿನ್ನೂ ಕಾಂಗ್ರೆಸ್ ನಲ್ಲೇ ಇದ್ದೀವಿ ಅಂತಾರೆ. ಆದರೆ ಕಾಂಗ್ರೆಸ್ ಮೀಟಿಂಗ್ ಗಳಿಗೆ ಯಾಕೆ ಹೋಗಿಲ್ಲ. ಸಂತೋಷ್, ಅಶ್ವಥ್ ನಾರಾಯಣ್ ಬಹಿರಂಗವಾಗಿ ಅನರ್ಹ ಶಾಸಕರ ಜತೆ ಕಾಣಿಸಿಕೊಂಡಿದ್ದಾರೆ. ಬಿಜೆಪಿ ಜತೆ ಸಭೆ ನಡೆಸಿದ್ದಾರೆ.

ವಿವೇಚನೆ ಅನುಸಾರ ಸ್ಪೀಕರ್ ಕ್ರಮ ಕೈಗೊಂಡಿದ್ದಾರೆ. ರಾಜೀನಾಮೆ ನೀಡುವಾಗ  ಸ್ಪೀಕರ್ ಗೆ ಪೂರ್ವ ಮಾಹಿತಿ ನೀಡಿರಲಿಲ್ಲ. ರಾಜ್ಯಪಾಲರ ಭೇಟಿ ಮೂಲಕ ಒತ್ತಡ ತಂತ್ರ  ಹೇರುವುದು ಸ್ಪಷ್ಟವಾಗಿದೆ.  ಅನರ್ಹ ಶಾಸಕರದ್ದು ಎಲ್ಲವೂ ಲೆಕ್ಕಾಚಾರದ ನಡೆಯಾಗಿತ್ತು. ರಾಜೀನಾಮೆ ಸ್ವೀಕರಿಸುವಂತೆ ರಾಜ್ಯಪಾಲರು ಸ್ಪೀಕರ್ ಗೆ ಸೂಚನೆ ನೀಡುತ್ತಾರೆ. ಇದು ಎಲ್ಲಾದರೂ ಉಂಟಾ…? ಕಪಿಲ್ ಸಿಬಲ್ ಪ್ರಶ್ನೆ

ಸುಪ್ರೀಂಮೊರೆ ಹೋಗಿದ್ದು, ರಾಜ್ಯಪಾಲರ ರಕ್ಷಣೆ ಪಡೆದಿದ್ದು. ಬಿಜೆಪಿ ನಾಯಕರು ಕಾಣಿಸಿಕೊಂಡಿದ್ದು, ಮಹರಾಷ್ಟ್ರ ಬಿಜೆಪಿ ಸರ್ಕಾರ ರಕ್ಷಣೆ ನೀಡಿದ್ದು ಎಲ್ಲವನ್ನೂ ಗಮನಿಸಬೇಕಿದೆ. ಇವೆಲ್ಲವೂ ಸ್ಪೀಕರ್ ಮೇಲೆ ಒತ್ತಡ ಹೇರುವ ತಂತ್ರವಾಗಿದೆ.

ವಿಪ್ ನೀಡುವ ಉದ್ದೇಶವೇ ಹಾಜರಾತಿಗಾಗಿ. ಅದನ್ನ ಈ ಎಲ್ಲಾ ಶಾಸಕರು ಉಲ್ಲಂಘಿಸಿದ್ದಾರೆ. ವಿಶ್ವಾಸಮತಯಾಚನೆ ವೇಳೆ ಎಲ್ಲಾ ಶಾಸಕರು ಹಾಜರಿರಬೇಕು. ನಾನು ಹೇಳಿದ ಅಂಶಗಳನ್ನು ಅನರ್ಹ ಶಾಸಕರ ಪರ ವಕೀಲರು ನಿರಾಕರಿಸುವಂತಿಲ್ಲ.

ಮಧ್ಯಂತರ ಆದೇಶ ನೀಡಿದರೇ 10ನೇ ಶೆಡ್ಯೂಲ್ ಗೆ ಏನು ಅರ್ಥ ಬರುತ್ತೆ..? ಹೀಗಾಗಿ ಸ್ಪೀಕರ್ ಆದೇಶ ಎತ್ತಿ ಹಿಡಿಯಿರಿ. ಮಧ್ಯಂತರ ಆದೇಶ ಕೊಡಬೇಡಿ..

Key words: supreme court- disqualified MLA-Hearing- congress-advacate-kapil sibal