ಬಳ್ಳಾರಿಗೆ ತೆರಳಲು ಮಾಜಿ ಸಚಿವ ಜನಾರ್ಧನರೆಡ್ಡಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್.

Promotion

ನವದೆಹಲಿ,ಅಕ್ಟೋಬರ್,10,2022(www.justkannada.in):  ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

ಮಗಳ 2ನೇ ಹೆರಿಗೆ ಹಿನ್ನೆಲೆ 2 ತಿಂಗಳ ಕಾಲ ಮಗಳ ಜೊತೆಗೆ ಇರಬೇಕಿದೆ. ಇದಕ್ಕಾಗಿ ಬಳ್ಳಾರಿಗೆ ತೆರಳಲು ಅನುಮತಿ ನೀಡಬೇಕು ಎಂದು ಜನಾರ್ದನ ರೆಡ್ಡಿ, ಕೋರ್ಟ್ ಗೆ ಮನವಿ ಮಾಡಿದ್ದರು.

ಇದೀಗ ಸುಪ್ರೀಂಕೋರ್ಟ್ ಜನಾರ್ಧನರೆಡ್ಡಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ.  ನ್ಯಾ.ಎಂ.ಆರ್.ಶಾ ಅವರ ಪೀಠ, ನವೆಂಬರ್ 6ರ ವರೆಗೆ ಬಳ್ಳಾರಿ ಭೇಟಿ ಹಾಗೂ ಅಲ್ಲಿ ವಾಸ್ತವ್ಯಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ.

Key words: Supreme Court -allowed -former Minister- Janardhan Reddy – Bellary.