ಚಿಕ್ಕ ಮಕ್ಕಳಿಗಾಗಿ ಆರ್ಟ್ ಸ್ಕೂಲ್ ಆರಂಭಿಸಿದ ನಟಿ ಸನ್ನಿ ಲಿಯೋನ್

ಮುಂಬೈ:ಜೂ-26:(www.justkannada.in) ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ಸಕ್ರೀಯರಾಗುತ್ತಿರುವ ಬಾಲಿವುಡ್ ನಟಿ ಸನ್ನಿಲಿಯೋನ್, ಚಿಕ್ಕ ಮಕ್ಕಳಿಗಾಗಿ ಹೊಸದೊಂದು ಯೋಜನೆಗೆ ಕೈಹಾಕಿದ್ದಾರೆ. ಪುಟಾಣಿ ಮಕ್ಕಳಿಗಾಗಿ ಆರ್ಟ್ ಸ್ಕೂಲ್ ವೊಂದನ್ನು ಆರಂಭಿಸುತ್ತಿದ್ದಾರಂತೆ ಸನ್ನಿ.

ಸನ್ನಿ ಲಿಯೋನ್, ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದು, ಈ ಶಾಲೆಯಲ್ಲಿ ಮಕ್ಕಳಿಗೆ ಆರ್ಟ್ ಹಾಗೂ ಫ್ಯೂಶನ್ ನ್ನೂ ಹೇಳಿಕೊಡಲಾಗುತ್ತಿದೆಯಂತೆ. ಈ ಯೋಜನೆ ಸನ್ನಿ ಹಾಗೂ ಆಕೆ ಪತಿ ಡೇನಿಯಲ್ ಅವರ ಕನಸಿನ ಯೋಜನೆ ಕೂಡ ಆಗಿದೆ ಎಂದು ಸನ್ನಿ ತಿಳಿಸಿದ್ದಾರೆ.

ತಮ್ಮ ಹೊಸ ಯೋಜನೆ ಬಗ್ಗೆ ಮಾತನಾಡಿದ ಸನ್ನಿ, ನಮ್ಮ ಉದ್ದೇಶ ಮಕ್ಕಳ ಬೌದ್ಧಿಕ, ಶಾರೀರಿಕ ವಿಕಾಸಕ್ಕೆ ವೇದಿಕೆ ಕಲ್ಪಿಸುವುದಾಗಿದೆ. ಮಕ್ಕಳು ಕೇವಲ ಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗಬಾರದು, ವಿಶ್ವದಲ್ಲಿನ ಹೊಸ ಹೊಸ ವಿಷಯಗಳನ್ನು ಅವರು ಕಲಿತುಕೊಳ್ಳಬೇಕು. ಜೊತೆಗೆ, ಲೈಫನ್ನು ಎಂಜಾಯ್ ಮಾಡಬೇಕು ಎಂಬುದು ನಮ್ಮ ಆಸೆ ಎಂದಿದ್ದಾರೆ.

ಈ ಯೋಜನೆಗಾಗಿ ಸನ್ನಿ ಲಿಯೋನ್ ಬಹಳ ಪರಿಶ್ರಮ ಪಟ್ಟಿದ್ದು, ಸ್ವತ: ಅವರೇ ಶಾಲಾ ಕಟ್ಟಡದ ವಿನ್ಯಾಸ, ಒಳಾಂಗಣ ಹಾಗೂ ವಿವಿಧ ಸೌಲಭ್ಯಗಳ ಕುರಿತು ರೂಪುರೇಷೆ ತಯಾರಿಸಿದ್ದಾರಂತೆ.

ಚಿಕ್ಕ ಮಕ್ಕಳಿಗಾಗಿ ಆರ್ಟ್ ಸ್ಕೂಲ್ ಆರಂಭಿಸಿದ ನಟಿ ಸನ್ನಿ ಲಿಯೋನ್
Sunny Leone opens an art school for toddlers