ರಾಮನಗರದಲ್ಲಿ ಎರಡು ಸಜೀವ ಬಾಂಬ್ ಗಳು ಪತ್ತೆ: ಎನ್ ಐಎ  ಮತ್ತು ಗುಪ್ತದಳದಿಂದ ಶೋಧಕಾರ್ಯ

ರಾಮನಗರ,ಜೂ,26,2019(www.justkanna.in):  ರಾಮನಗರದ ಟಿಪ್ಪುನಗರದ ರಾಜಕಾಲುವೆ ಬಳಿ ಎರಡು ಸಜೀವ ಬಾಂಬ್ ಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ದೊಡ್ಡಬಳ್ಳಾಪುರದಲ್ಲಿ ಎನ್ ಐಎ ಬಂಧಿಸಿದ್ದ ಶಂಕಿತ ಉಗ್ರ ಹಬೀಬುಲ್ಲಾ ರೆಹಮನ್ ನೀಡಿದ ಮಾಹಿತಿ ಮೇರೆಗೆ ರಾಮನಗರ ಟಿಪ್ಪುನಗರದ ರಾಜಕಾಲುವೆಯಲ್ಲಿ ಎನ್ ಐಎ ಹಾಗೂ ಗುಪ್ತದಳದ ಅಧಿಕಾರಿಗಳು ಶೋಧ ನಡೆಸಿದ 2 ಸಜೀವ ಬಾಂಬ್ ಗಳು ಪತ್ತೆಯಾಗಿವೆ ಎನ್ನಲಾಗಿದೆ.

ಇನ್ನೂ ಹಲವೆಡೆ ಬಾಂಬ್ ಗಳಿರುವ ಶಂಕೆ ಇದ್ದು ಈ ಹಿನ್ನೆಲೆ  ಎನ್‌ಐಎ ಹಾಗೂ ಪೊಲೀಸರು, ಶ್ವಾನದಳದ ಸಿಬ್ಬಂದಿ ಸದ್ಯ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಂಕಿತ ಉಗ್ರ ಹಬೀಬುಲ್ಲಾ 2014 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಪೋಟಿಸಿದ್ದ. ಈತನನ್ನು ನಿನ್ನೆ ಎನ್ ಐಎ ದೊಡ್ಡಬಳ್ಳಾಪುರದಲ್ಲಿ  ಬಂಧಿಸಿತ್ತು. ಬಂಧಿತ ಹಬಿಬ್ಬುಲ್ಲಾ ಬಾಂಗ್ಲಾ ಮೂಲದ ಉಗ್ರ ಸಂಘಟನೆಯ ಸದಸ್ಯನಾಗಿದ್ದಾನೆ.

Key words: Two- live bombs -found – Ramanagara