ಟೋಕಿಯೋ ಒಲಿಂಪಿಕ್ಸ್’ಗೆ ಅರ್ಹತೆ ಪಡೆದ ಸುಮಿತ್ ಮಲಿಕ್

Promotion

ಬೆಂಗಳೂರು, ಮೇ 07, 2021 (www.justkannada.in):

ಭಾರತದ ಕುಸ್ತಿಪಟು ಸುಮಿತ್ ಮಲಿಕ್ 125 ಕೆ.ಜಿ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸತ್ಯವ್ರತ್‌ ಕಡಿಯಾನ್‌ ಹಾಗೂ ಅಮಿತ್‌ ಧನ್‌ಕರ್‌ ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಕುಸ್ತಿ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದಾರೆ.

ಇನ್ನು ಪದಕಕ್ಕಾಗಿ ಇಂದು ಪೈಪೋಟಿ ನಡೆಯಲಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕುಸ್ತಿಪಟುಗಳಿಗೆ ಇದು ಕೊನೆ ಅವಕಾಶವಾಗಿತ್ತು.

ಟೋಕಿಯೋ ಒಲಿಂಪಿಕ್ಸ್‌ಗೆ ತೆರಳಲಿರುವ ಹಲವು ಭಾರತೀಯ ಶೂಟರ್‌ಗಳು, ಕೋಚ್‌ ಹಾಗೂ ಅಧಿಕಾರಿಗಳು ಗುರುವಾರ ವಿವಿಧ ನಗರಗಳಲ್ಲಿ ಮೊದಲ ಡೋಸ್‌ ಕೊರೋನಾ ಲಸಿಕೆ ಪಡೆದರು.