ಅಂಬಿ ಹುಟ್ಟುಹಬ್ಬಕ್ಕೆ ಸುಮಲತಾ ಬಿಚ್ಚಿಟ್ಟ ಮನದ ಮಾತುಗಳು…

Promotion

ಬೆಂಗಳೂರು, ಮೇ 29, 2020 (www.justkannada.in): ಇಂದು ರೆಬಲ್ ಸ್ಟಾರ್ ಅಂಬರೀಶ್ ಜನ್ಮದಿನ. ಆದರೆ ಈ ಸಂಭ್ರಮವಾಚರಿಸಲು ಅವರೇ ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳನ್ನು ಅಭಿಮಾನಿಗಳು ಪ್ರೀತಿಯಿಂದ ಮೆಲುಕು ಹಾಕುತ್ತಿದ್ದಾರೆ.

ಪತಿ ಅಂಬರೀಶ್ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸಂದೇಶ ಬರೆದುಕೊಂಡಿರುವ ಸುಮಲತಾ ‘ಇಂದು ಅವರು ಇದ್ದಿದ್ದರೆ 68 ವರ್ಷವಾಗುತ್ತಿತ್ತು. ಆದರೆ ಅವರೇ ನಮ್ಮೊಂದಿಗಿಲ್ಲ. ಆದರೆ ಈ ಶ್ರೇಷ್ಠ ವ್ಯಕ್ತಿಯ ಜತೆ ಜೀವನದ ಕೆಲವು ಹೆಜ್ಜೆಗಳನ್ನು ಜತೆಯಾಗಿ ನಡೆದ ನಾನು ಪುಣ್ಯವಂತೆ’ ಎಂದಿದ್ದಾರೆ.

ಇನ್ನು, ಅಂಬರೀಶ್ ಜನ್ಮದಿನಕ್ಕೆ ಶುಭ ಹಾರೈಸಿರುವ ಸ್ಯಾಂಡಲ್ ವುಡ್ ತಾರೆಯರು, ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ.