ದೇವರು ಎಲ್ಲರಿಗೂ ‘ತಾಕತ್ತು’ ಕೊಟ್ಟಿದ್ದಾನೆ ಎಂದು ಕಿಚ್ಚ ಹೇಳಿದ್ದು ಯಾರಿಗೆ!?

Promotion

ಬೆಂಗಳೂರು, 31, 2021 (www.justkannada.in): ‘ರಾಬರ್ಟ್’ ಸಮಸ್ಯೆಯಿಂದ ಕುರಿತು ಮಾತನಾಡಲು ನಟ ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ.

ಅವರ ಸಿನಿಮಾ ಅವರು ಕಾಪಾಡಿಕೊಳ್ತಾರೆ ಎಂದಷ್ಟೇ ಕಿಚ್ಚ ಪ್ರತಿಕ್ರಿಯಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಗೆ ತೆಲುಗು ಚಿತ್ರರಂಗದಿಂದ ಸಮಸ್ಯೆ ಎದುರಾಗಿತ್ತು. ಈ ಕುರಿತ ಪ್ರಶ್ನೆಗೆ ದುಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಲು ನಯವಾಗಿ ನಿರಾಕರಿಸಿದ್ದಾರೆ ಕಿಚ್ಚ.

ನನ್ನ ಸಿನಿಮಾವನ್ನು ನಾನು ಕಾಪಾಡಿಕೊಳ್ಲುತ್ತೇನೆ. ಅವರವರ ಸಿನಿಮಾ ಅವರು ಕಾಪಾಡಿಕೊಳ್ಳುವ ತಾಕತ್ತು ದೇವರು ಎಲ್ಲರಿಗೂ ಕೊಟ್ಟಿದ್ದಾನೆ. ಅದರ ಬಗ್ಗೆ ನಾನೇನೂ ಹೇಳಲ್ಲ ಎಂದಿದ್ದಾರೆ.