‘ಪ್ರೈಡ್ ಆಫ್ ಕರ್ನಾಟಕ’ ಅವಾರ್ಡ್ ಸ್ವೀಕರಿಸಿದ ಕಿಚ್ಚ ಸುದೀಪ್

Promotion

ಬೆಂಗಳೂರು, ಜನವರಿ 06, 01, 2020 (www.justkannada.in): ಜೀ ತಮಿಳು ಸಿನಿಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರೈಡ್ ಆಫ್ ಕರ್ನಾಟಕ ಅವಾರ್ಡ್’ಗೆ  ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ.

ಸಾಮಾನ್ಯವಾಗಿ ನನಗೆ ಪ್ರಶಸ್ತಿ ಸಮಾರಂಭಗಳಿಗೆ ಹಾಜರಾಗುವುದು ಇಷ್ಟವಾಗಲ್ಲ. ಆದರೆ ಈ ಸಮಾರಂಭಕ್ಕೆ ಕೆಲವು ವ್ಯಕ್ತಿಗಳ ಕಾರಣಕ್ಕೆ ಹಾಜರಾದೆ. ಇದರಿಂದ ಕೆಲವರಿಗೆ ಸಂತೋಷವಾಗಿದೆ ಎನ್ನುವುದೇ ನನಗೆ ಖುಷಿಯ ವಿಚಾರ ಎಂದು ಸುದೀಪ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಸುದೀಪ್ ಪ್ರಶಸ್ತಿ ಸಮಾರಂಭಗಳಿಗೆ ಹಾಜರಾಗುವುದಿಲ್ಲ. ಆದರೆ ಇದೀಗ ಸಮಾರಂಭಕ್ಕೆ ಹಾಜರಾಗಿದ್ದಾರೆ. ಬಳಿಕ ಕೆಲವು ವ್ಯಕ್ತಿಗಳ ಒತ್ತಾಯದಿಂದಾಗಿ ಸಮಾರಂಭಕ್ಕೆ ಹಾಜರಾದೆ ಎಂದಿದ್ದಾರೆ.