ಆಂಧ್ರದಲ್ಲೂ ‘ರಾಕಿ ಭಾಯ್’ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಫ್ಯಾನ್ಸ್ !

ಬೆಂಗಳೂರು, ಜನವರಿ 06, 01, 2020 (www.justkannada.in): ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಮೊದಲೇ ಆಂಧ್ರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೈಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಯಶ್ ಹುಟ್ಟುಹಬ್ಬ ಜನವರಿ 8 ರಂದು. ಆದರೆ ಯಶ್ ಅಭಿಮಾನಿಗಳಿಗೆ ಈಗಲೇ ಹಬ್ಬ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ನಡೆದಿದೆ.

ಆದರೆ ಆಂಧ‍್ರದಲ್ಲಿ ಶೂಟಿಂಗ್ ಗೆ ತೆರಳಿದ್ದಾಗ ಅಲ್ಲಿಯೇ ಅಭಿಮಾನಿಗಳು ಯಶ್ ಕೈಯಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.