ವಿಶ್ವಾಸವಿಟ್ಟು ಬರುವ ಜನತೆಗೆ ನಾವು ನ್ಯಾಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಬೇಕು-ಹೈಕೋರ್ಟ್ ಸಿಜೆ ಅಭಯ್ ಶ್ರೀನಿವಾಸ್ ಓಕಾ ಸಲಹೆ…

ಮೈಸೂರು,ಜು,2019(www.justkannada.in): ವಿಶ್ವಾಸವಿಟ್ಟು ಬರುವ ಜನತೆಗೆ ನಾವು ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಬೇಕು ಎಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ  ಅಭಯ್ ಶ್ರೀನಿವಾಸ್ ಓಕಾ ಸಲಹೆ ನೀಡಿದರು.

ಮೈಸೂರು ಕೌಟುಂಬಿಕ ನ್ಯಾಯಾಲಯದ ಮೊದಲ ಮತ್ತು ನಾಲ್ಕನೇ ಮಹಡಿ  ಉದ್ಘಾಟನೆ ಮಾಡಲಾಯಿತು.  ಗಿಡಕ್ಕೆ ನೀರುಣಿಸುವ  ಹಾಗೂ ನೂತನ ಕಟ್ಟಡಕ್ಕೆ ಟೇಪ್ ಕತ್ತರಿಸುವ ಮೂಲಕ ಕರ್ನಾಟಕ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್  ಶ್ರೀನಿವಾಸ್ ಓಕಾ ಅವರು ಉದ್ಘಾಟನೆ ನೆರವೇರಿಸಿದರು.

ನೂತನ ನ್ಯಾಯಾಲಯಗಳ ಸಂಕೀರ್ಣ ಮಳಲವಾಡಿಯಲ್ಲಿ ಜಿಲ್ಲಾ ನ್ಯಾಯಾಂಗ, ಸಾರ್ವಜನಿಕ ಸೇವಾ ಇಲಾಖೆ, ಮೈಸೂರು ಬಾರ್ ಅಸೋಸಿಯೇಶನ್ ವತಿಯಿಂದ ಮಳಲವಾಡಿಯಲ್ಲಿರುವ ನೂತನ ನ್ಯಾಯಾಲಯದ ಕಟ್ಟಡದ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ  ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ. ಅಭಯ್  ಶ್ರೀನಿವಾಸ್ ಓಕಾ, ನಗರದಲ್ಲಿ ಸುಂದರ ನ್ಯಾಯಾಲಯ ತಲೆ ಎತ್ತಿದೆ. ಸುಂದರತೆಯ ಜೊತೆಗೆ ಮೂಲಸೌಕರ್ಯವನ್ನು ಹೊಂದಿದೆ. ಸುತ್ತಮುತ್ತಲಿನ ಪರಿಸರ ಕೂಡ ತುಂಬಾ ಚೆನ್ನಾಗಿದೆ. ಮೂಲಸೌಕರ್ಯ, ಸುತ್ತಮುತ್ತಲ ಪರಿಸರ ಸುಂದರವಾಗಿದ್ದರೆ ಸಾಲದು, ನೀವೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಒಂದು ವರ್ಷದ ಹಿಂದೆ, ನಿನ್ನೆ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದ್ದಿರೋ ಅದಕ್ಕಿಂತಲೂ ಉತ್ತಮವಾಗಿರಬೇಕು. ಜನತೆ ನಿಮ್ಮ ಮೇಲೆ ವಿಶ್ವಾಸವಿಟ್ಟು ಬರುತ್ತಾರೆ. ಅವರು ನಿಮ್ಮ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಬಾರದು.. ನಾಗರಿಕರು ಹೆಚ್ಚು  ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಸಾಮಾನ್ಯನೋರ್ವ ನ್ಯಾಯ ಕೇಳಿ ಬಂದಾಗ ನಮ್ಮ ಉತ್ತಮ ಸೇವೆಯನ್ನು ನೀಡಬೇಕು. ಸ್ವತಂತ್ರ ಭಾರತದಲ್ಲಿ ನಮ್ಮ  ಕಲ್ಪನೆಗಳು ಬದಲಾಗಬೇಕು. ಮಾನವೀಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ, ಜಾತಿ ಧರ್ಮವನ್ನು ಮರೆತು  ಆಧುನಿಕ ಭಾರತದ ನಿರ್ಮಾತೃಗಳಾಬೇಕೆಂದು ಬಯಸಿದ್ದರು ಎಂದು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ತಿಳಿಸಿದರು.

Key words: succeed – justice – people –confidence-High Court -CJ Abhay Srinivas Oka