ರಶ್ಮಿಕಾ ವಿರುದ್ಧ ಕನ್ನಡಿಗರ ಆಕ್ರೋಶ !

ಬೆಂಗಳೂರು, ಜುಲೈ 20, 2019 (www.justkannada.in): ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್’ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ವಿರುದ್ಧ ಸಾಕಷ್ಟು ಆಕ್ರೊಶ ವ್ಯಕ್ತವಾಗುತ್ತಿದೆ.

ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್‍ಗಾಗಿ ತಮಿಳುನಾಡಿನಲ್ಲಿ ಸಂದರ್ಶನ ನೀಡುತ್ತಿದ್ದ ವೇಳೆ, ಸಂದರ್ಶಕ ನಿಮಗೆ ಕನ್ನಡ ಮಾತನಾಡಲು ಸುಲಭ ಅಲ್ಲವ ಅಂತ ಕೇಳಿದಾಗ ರಶ್ಮಿಕಾ ಮಂದಣ್ಣ ಇಲ್ಲ `ಕನ್ನಡ ತುಂಬಾ ಕಷ್ಟ’ಸರಿಯಾಗಿ ಮಾತನಾಡಲು ಬರೋಲ್ಲ ಎಂದಿದ್ದಾರೆ.

ನನಗೆ ಯಾವ ಭಾಷೆಯೂ ಸರಿಯಾಗಿ ಬರೋದಿಲ್ಲ ಅಂತ ಹೇಳಿದ್ದಾರೆ. ಒಂದು ವರ್ಷದಲ್ಲೇ ತಮಿಳು ತೆಲುಗಿನಲ್ಲಿ ಮಾತನಾಡೋ ರಶ್ಮಿಕಾ ಕರ್ನಾಟಕದಲ್ಲಿ ಹುಟ್ಟಿ ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲವ ಅಂತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.