ಕೋವಿಡ್ 3ನೇ ಅಲೆ ಬಗ್ಗೆ ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ.

ಬೆಂಗಳೂರು,ಜೂನ್,22,2021(www.justkannada.in):  ರಾಜ್ಯದಲ್ಲಿ ಕೊರೊನಾ 2ನೇ ಅಲೆ ಕಡಿಮೆಯಾಗುತ್ತಿದ್ದಂತೆ 3ನೇ ಅಲೆಯ ಭೀತಿ ಎದುರಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ  3ನೇ ಅಲೆ ತಡೆಗಟ್ಟಲು ಪೂರ್ವ ಸಿದ್ಧತೆ ಬಗ್ಗೆ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.jk

ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ತಜ್ಞರ ಜತೆ ಸಭೆ ನಡೆಯಿತು. ಈ ವೇಳೆ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ 92 ಪುಟಗಳ ವರದಿ ಸಲ್ಲಿಕೆ ಮಾಡಿದೆ. ವರದಿಯಲ್ಲಿ  ತಜ್ಞರು ಶಾಲೆ ಆರಂಭಕ್ಕೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಮಾತನಾಡಿರುವ ಡಾ.ದೇವಿಪ್ರಸಾದ್ ಶೆಟ್ಟಿ,  ಸರ್ಕಾರಕ್ಕೆ ಮಧ್ಯಂತರ ವರದಿಯಷ್ಟೇ ಸಲ್ಲಿಕೆ ಮಾಡಿದ್ದೇವೆ. ವರದಿಯನ್ನ ಇಂದು ಬೆಳಿಗ್ಗೆ ಸಿದ್ಧಪಡಿಸಿದ್ದೇವೆ. ಇದು ಒಬ್ಬರೇ ತಯಾರಿಸಿರುವ ವರದಿಯಲ್ಲ. ಹೀಗಾಗಿ ವರದಿ ಬಗ್ಗೆ ನಾನು ಏನು ಹೇಳಲು ಆಗಲ್ಲ. ಶಾಲಾ ಆರಂಭದ ಬಗ್ಗೆ ಹೇಳಲು ಆಗಲ್ಲ. ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರವೇ ಹೇಳಲಿದೆ ಎಂದರು.

Key words: Submission – interim report – government – experts – covid- 3rd wave.