ಮೈಸೂರಿನಲ್ಲಿ ಡೆಲ್ಟಾಪ್ಲಸ್ ವೈರಸ್ ಪತ್ತೆ ವಿಚಾರ: ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಬಗಾದಿ ಗೌತಮ್.

ಮೈಸೂರು,ಜೂನ್,22,2021(www.justkannada.in):  ಮೈಸೂರಿನಲ್ಲಿ ಡೆಲ್ಟಾಪ್ಲಸ್ ವೈರಸ್ ಪತ್ತೆಯಾದ ಬಗ್ಗೆ ಸುದ್ದಿಯಾದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಮೈಸೂರಿನಲ್ಲಿ ಡೆಲ್ಟಾಪ್ಲಸ್ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.jk

ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿ ಮಾಹಿತಿ ನೀಡಿದ ಡಿಸಿ ಬಗಾದಿ ಗೌತಮ್, ಕಳೆದ ಏಳು ದಿನಗಳಲ್ಲಿ ಜಿಲ್ಲೆಯಿಂದ 40 ಸ್ಯಾಂಪಲ್ಸ್ ಕಳುಹಿಸಲಾಗಿದೆ. ಮೈಸೂರಿನ ಮೆಡಿಕಲ್ ಕಾಲೇಜಿನಿಂದ ಬೆಂಗಳೂರಿನ ನಿಮಾನ್ಸ್ ಗೆ ಸ್ಯಾಂಪಲ್ ಕಳುಹಿಸಲಾಗಿದೆ. ಡೆಲ್ಟಾಪ್ಲಸ್ ವೈರಸ್ ಪತ್ತೆಯಾಗಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಮೈಸೂರಿಗರು ಆತಂಕಪಡುವ ಅಗತ್ಯವಿಲ್ಲ. ಎಲ್ಲರೂ ಕೊರೊನಾ ನಿಯಮ ಪಾಲಿಸಿ ಎಂದು ಹೇಳಿದರು.

ಜುಲೈ 5ರೊಳಗೆ ಪಾಸಿಟಿವಿಟಿ ರೇಟ್ ಕಡಿಮೆಯಾಗಲಿದೆ.

ಮೈಸೂರಿನಲ್ಲಿ ಕಳೆದ 10 ದಿನಗಳಿಂದ ಟೆಸ್ಟಿಂಗ್ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ನೆನ್ನೆ ಒಂದೇ ದಿನ 40 ಸಾವಿರ ವ್ಯಾಕ್ಸಿನ್ ನೀಡಲಾಗಿದೆ. ಜುಲೈ 5ರೊಳಗೆ ಪಾಸಿಟಿವಿಟಿ ರೇಟ್ ಕಡಿಮೆಯಾಗಲಿದೆ. ಅತೀ ಹೆಚ್ಚು ಟೆಸ್ಟಿಂಗ್ ನಡೆಯುತ್ತಿರುವುದರಿಂದ ಪಾಸಿಟಿವಿಟಿ ರೇಟ್ ಶೇ.9ರಷ್ಟಿದೆ. ಲಾಕ್ ಡೌನ್ ಮುಂದುವರಿಕೆಯಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಜನ ಸಹಕಾರ ನೀಡುತ್ತಿರುವುದರಿಂದ ಅನ್ ಲಾಕ್ ಮಾಡುವ ವಾತಾವರಣ ನಿರ್ಮಾಣ ವಾಗ್ತಿದೆ ಎಂದು ಡಿಸಿ ಬಗಾದಿ ಗೌತಮ್ ತಿಳಿಸಿದರು.

ಕೊರೋನಾ 3ನೇ ಅಲೆ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ‌. ಪ್ರತಿದಿನ 9800 ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಎಲ್ಲಾ ತಾಲ್ಲೂಕು ಅಧಿಕಾರಿಗಳಿಗೂ ಈ ಬಗ್ಗೆ ನಿರ್ದೇಶನ ನೀಡಲಾಗಿದೆ‌. ನಾಳೆಯಿಂದ ಮತ್ತಷ್ಟು ಟೆಸ್ಟಿಂಗ್ ಪ್ರಮಾಣವನ್ನ ಹೆಚ್ಚಿಸಲಾಗುವುದು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ದೃಷ್ಟಿಯಲ್ಲಿ ಜಿಲ್ಲಾಡಳಿತ ಸಿದ್ದತೆ ಮಾಡಿಕೊಡಿದೆ‌ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದರು.

Key words: DeltaPlus- virus- detection – Mysore-DC-Bagadi Gautam