ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಖಾಸಗಿ ಬಸ್ ಗಳ ವ್ಯವಸ್ಥೆ: ಬಸ್ ನಿಲ್ಧಾಣಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ…

ಮೈಸೂರು,ಏಪ್ರಿಲ್,7,2021(www.justkannada.in):  ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರ ಬಂದ್ ಆಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರದಿಂದ ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ.Illegally,Sand,carrying,Truck,Seized,arrest,driver

ಈ ನಡುವೆ ಮೈಸೂರಿನಲ್ಲೂ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ಸಂಚರಿಸುತ್ತಿವೆ. ಬಸ್ ನಿಲ್ದಾಣಕ್ಕೆ  ಆರ್.ಟಿ.ಓ ಅಧಿಕಾರಿ ದೀಪಕ್  ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಖಾಸಗಿ ಬಸ್ ಗಳ ಪರ್ಮಿಟ್ ಪರಿಶೀಲನೆ  ನಡೆಸಿ ಬಳಿಕ ಮಾತನಾಡಿದ ಆರ್.ಟಿ.ಓ ಅಧಿಕಾರಿ ದೀಪಕ್, ತುರ್ತು ಪರಿಸ್ಥಿತಿ ಹಿನ್ನಲೆ ಖಾಸಗಿ ಬಸ್ ಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡಲಾಗಿದೆ. ದರದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಸರ್ಕಾರಿ ದರವನ್ನೇ ನಿಗಧಿ ಮಾಡಲಾಗಿದೆ. ಹೆಚ್ಚು ಹಣ ವಸೂಲಿ ಮಾಡೊದು ಗಮನಕ್ಕೆ ಸೂಕ್ತ ಕ್ರಮ  ಕೈಗೊಳ್ಳಲಾಗುತ್ತದೆ. ಇಂದಿನಿಂದ ಮುಷ್ಕರ ಮುಗಿಯುವವರೆಗೂ ಖಾಸಗಿ ಬಸ್ ಗಳಿಗೆ ತುರ್ತು ಪರ್ಮಿಟ್ ನೀಡಲಾಗಿದೆ. ಅವಶ್ಯಕತೆವಿದ್ದರೆ ಬಸ್ ಗಳ ದಾಖಲಾತಿ ಪರಿಶೀಲಿಸಿ ಸಂಖ್ಯೆ ಹೆಚ್ಚಿಸುತ್ತೇವೆ ಎಂದು ಹೇಳಿದರು.strike-transport-workers-mysore-private-buses-visit-inspect-officers

ಅಗತ್ಯ ಇರುವ ಕಡೆಗಳಿಗೆ ಖಾಸಗಿ ಬಸ್ ಸಂಚಾರ ಮಾಡ್ತಿವೆ- ಮೈಸೂರಿನ ಗ್ರಾಮಾಂತರ ಡಿಟಿಓ ಹೇಮಂತ್ ಕುಮಾರ್…

ಇನ್ನೊಂದೆಡೆ ಮೈಸೂರಿನ ಗ್ರಾಮಾಂತರ ಡಿಟಿಓ ಹೇಮಂತ್ ಕುಮಾರ್ ಮಾತನಾಡಿ,  ಕೊನೆ ಕ್ಷಣದವರೆಗೆ ನಮ್ಮ ಸಿಬ್ಬಂದಿ ಮನವೊಲಿಸಲು ಪ್ರಯತ್ನಿಸಿದವು. ಅವರು ಒಪ್ಪದ ಕಾರಣ ಖಾಸಗಿ ಬಸ್ ಮೂಲಕ ಜನರಿಗೆ ಸೇವೆ ನೀಡುತ್ತಿದ್ದೇವೆ. ಸರ್ಕಾರಿ ದರದಲ್ಲೆ ಸೇವೆ ನೀಡುತ್ತಿದ್ದೇವೆ. ಪ್ರಮುಖ ಮಾರ್ಗಗಳಿಗೆ ಸಂಚಾರಕ್ಕಾಗಿ ಖಾಸಗಿ ಬಸ್ ಓಡಲಾಗುತ್ತಿದೆ.ಮುಷ್ಕರದ ಬಗ್ಗೆ ಹಿರಿಯ ಅಧಿಕಾರಿಗಳು ಏನ್ ಹೇಳ್ತಾರೆ ಅದನ್ನ ಫಾಲೋ ಮಾಡುತ್ತೀವಿ. ಅಗತ್ಯ ಇರುವ ಕಡೆಗಳಿಗೆ ಖಾಸಗಿ ಬಸ್ ಸಂಚಾರ ಮಾಡುತ್ತೇವೆ. ಹೊರರಾಜ್ಯದ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ತಿಳಿಸಿದರು.

Key words: strike -transport workers-mysore- Private buses-Visit -inspect -officers.