ಆಧಾರ ರಹಿತ ಸುದ್ದಿ ನಿಲ್ಲಿಸಿ: ನ್ಯೂಸ್ ಚಾನೆಲ್ ಗಳಿಗೆ ಚುನಾವಣಾ ಆಯೋಗದ ವಾರ್ನಿಂಗ್…..

ಬೆಂಗಳೂರು,ಡಿಸೆಂಬರ್,30,2020(www.justkannada.in): ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳುತ್ತಿದೆ. ಈ ನಡುವೆ  ಗ್ರಾಮ ಪಂಚಾಯತ್  ಚುನಾವಣೆಯ ಫಲಿತಾಂಶವನ್ನ ರಾಜಕೀಯ ಪಕ್ಷಗಳ ಆಧಾರಿತ ಚುನಾವಣೆಯಂತೆ ಪ್ರಸಾರ ಮಾಡುತ್ತಿರುವುದನ್ನ ನಿಲ್ಲಿಸುವಂತೆ ದೃಶ್ಯ/ಶ್ರವಣ/ ಪತ್ರಿಕಾ ಮಾಧ್ಯಮಗಳಿಗೆ ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. stop-baseless-news-election-commission-warning-news-channels

ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಚುನಾವಣಾ ಆಯೋಗ, ಇಂದು ಗ್ರಾಮ ಪಂಚಾಯಿತಿ ಚುನಾವಣಾ ಮತ ಎಣಿಕೆ  ನಡೆಯುತ್ತಿದೆ. ಈ ಚುನಾವಣೆ ಪಕ್ಷ ರಹಿತವಾಗಿದೆ. ಆದರೆ ಕೆಲವು ಟಿವಿ ವಾಹಿನಿಗಳಲ್ಲಿ ರಾಜಕೀಯ ಪಕ್ಷಗಳ ಆಧಾರಿತ ಚುನಾವಣೆಯಂತೆ ಪ್ರಸಾರ ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ.stop-baseless-news-election-commission-warning-news-channels

ಅದ್ದರಿಂದ ಈ ರೀತಿ ಆಧಾರವಿಲ್ಲದೇ ಫಲಿತಾಂಶವನ್ನು ಪಕ್ಷವಾರು ಪ್ರಸಾರ ಮಾಡಬಾರದು ಎಂದು ದೃಶ್ಯ/ಶ್ರವಣ/ ಪತ್ರಿಕಾ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ  ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

Key words: Stop –baseless- news-Election Commission -Warning -News Channels