ಉಚಿತ ಪ್ರಯಾಣದ ಬಸ್ ಗಳಿಗೆ ಸ್ಟಿಕ್ಕರ್:  ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ.

Promotion

ಬೆಂಗಳೂರು,ಜೂನ್,16,2023(www.justkannada.in): ಉಚಿತ ಪ್ರಯಾಣದ ಬಸ್ ಗಳಿಗೆ ಸ್ಟಿಕ್ಕರ್ ಅಂಟಿಸುವುದಾಗಿ ಹೇಳಿರುವ ಮತ್ತೊಂದು ಷರತ್ತಿನ ಬಗ್ಗೆ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ,  ಉಚಿತ ಪ್ರಯಾಣದ ಬಸ್‌ಗಳಿಗೆ ಸ್ಟಿಕ್ಕರ್ ಅಂಟಿಸುತ್ತಾರಂತೆ. ಸ್ವಾಮಿ ಸಿದ‍್ಧರಾಮಯ್ಯನವರೇ, ಬಸ್ ಹತ್ತುವ ಮಹಿಳೆಯರು, ಬಸ್ ನಂಬರ್ ನೋಡಬೇಕೋ, ನೀವು ಮೆತ್ತಿರುವ ಸ್ಟಿಕ್ಕರ್ ಗಮನಿಸಬೇಕೋ… ಎಂದು ಪ್ರಶ್ನಿಸಿದೆ.

ಲಕ್ಸುರಿ ಅಲ್ಲದ ಎಲ್ಲಾ ಸಾಮಾನ್ಯ ಬಸ್‌ಗಳಲ್ಲಿ ಫ್ರೀ, ಫ್ರೀ, ಫ್ರೀ ಎಂದಿದ್ದು ನೀವೇ ಅಲ್ಲವೇ… ಹಾಗಾದ್ರೆ ಈಗ ಈ ಸ್ಟಿಕ್ಕರ್ ಯಾಕೆ?  ಸಾಮಾನ್ಯ ಬಸ್‌ಗಳಲ್ಲಿಯೂ ಕೆಲವೇ ಕೆಲವಕ್ಕೆ ಸ್ಟಿಕ್ಕರ್ ಅಂಟಿಸಿ ನಾಡಿನ ಹೆಣ್ಣು ಮಕ್ಕಳ ಕಿವಿಗೆ ಚೆಂಡು ಹೂವು ಮುಡಿಸುವ ‘ಗ್ಯಾರಂಟಿ ಪ್ರೋಗ್ರಾಂ’ ಇದು! ಇದು ನಿಮಗೆ ‘ಉಚಿತ’ವಲ್ಲ ಎಂದು ಬಿಜೆಪಿ ಟೀಕಿಸಿದೆ.

Key words: Sticker – free -travel –buses-BJP –congress- Govt.