“ಅವರಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ನನ್ನ ಕೆಲಸವಲ್ಲ”: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

Promotion

ಮೈಸೂರು,ಫೆಬ್ರವರಿ,14,2021(www.justkannada.in) : ಬಾರ್‌ನಲ್ಲಿ ನಡೆದ ಗಲಾಟೆಯನ್ನು ನಾನು ನೆನಪು ಮಾಡಿದೆ ಅಷ್ಟೆ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಟೀಕೆ ಮಾಡಿಲ್ಲ. ದಿನ ಬೆಳಗಾದರೆ ಅವರಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ನನ್ನ ಕೆಲಸವಲ್ಲ. ನಾನು ರಾಜ್ಯದ ಜನರ ಹೃದಯದಲ್ಲಿ ಇರಲು ಕೆಲಸ ಮಾಡುತ್ತಿದ್ದೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.jkಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ವಿಚಾರವಾಗಿ ಆಕ್ರೋಶವ್ಯಕ್ತಪಡಿಸಿದರು.

ನನ್ನ ಬದುಕು ತೆರೆದ ಪುಸ್ತಕ ಯಾರು ಬೇಕಾದರೂ ನೋಡಬಹುದು. ಕಾಶಪ್ಪನವರು ಏನಾದರೂ ಮಾತನಾಡಲಿ. ಮಾಧ್ಯಮದ ಮುಂದೆ ಬಂದು ಯಾರಾದರೂ ಏನಾದರೂ ಮಾತನಾಡಲಿ. ಅವರು ಬಾಯಿ ಮುಚ್ಚಿಸಲು ನಾನು ಯಾರು ಎಂದು ಪ್ರತಿಕ್ರಿಯಿಸಿದರು.statement,Feedback,give,My,Not work,State,BJP,vice,president,B.Y.Vijayendraನಾನು ಇನ್ನು ಮುಂದೆ ಅವರ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಒಮ್ಮೆ ಶಾಸಕರಾದವರು ಸಿಎಂ ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ ಅಂತಾ ಹೇಳಿದ್ದೇ ಎಂದು ತಿಳಿಸಿದ್ದಾರೆ.

key words : statement-Feedback-give-My-Not work-State-BJP- vice-president-B.Y.Vijayendra