ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ವಿಚಾರ- ಸಿದ್ಧರಾಮಯ್ಯಗೆ ಸಚಿವ ಭೈರತಿ ಬಸವರಾಜು ತಿರುಗೇಟು…

Promotion

ಬೆಳಗಾವಿ,ಜನವರಿ,7,2021(www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿರುಗೇಟು ನೀಡಿದ್ದಾರೆ.

ಸಿದ್ಧರಾಮಯ್ಯನವರು ಯಾವಾಗ ಜ್ಯೋತಿಷಿಯಾದರೂ ಎಂದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯಗೆ ಕನಸು ಗಿನಿಸು ಬಿದ್ದಿದೆಯೋ ಗೊತ್ತಿಲ್ಲ. ಬಿ.ಎಸ್​. ಯಡಿಯೂರಪ್ಪ ನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಇನ್ನು ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಲ್ಲಿ ಬದಲಾವಣೆ ಇಲ್ಲ ಎಂದು ಸಚಿವ ಭೈರತಿ ಬಸವರಾಜ್​  ಸ್ಪಷ್ಟನೆ ನೀಡಿದರು.jk-logo-justkannada-mysore

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವಭೈರತಿ ಬಸವರಾಜು,  ಸದ್ಯಕ್ಕೆ ರಾಜ್ಯದಲ್ಲಿ  ಸಿಎಂ‌ ಖುರ್ಚಿ ಖಾಲಿ ಇಲ್ಲ. ಸಿಎಂ ಬದಲಾವಣೆ ಇಲ್ಲ ಎಂದರು.statement-cm-change-minister-bhairati-basavaraju-tong-siddaramaiah

ಕಾಂಗ್ರೆಸ್ ಬಿಟ್ಟು ಹೋದವರು ಮರಳಿ ಬರುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌  ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಸಚಿವ ಭೈರತಿ ಬಸವರಾಜು, ಅದು ಕೇವಲ ಭ್ರಮೆ‌. ನಾವು ಯಾರೂ ಮರಳಿ ಕಾಂಗ್ರೆಸ್ ಗೆ ಹೋಗಲ್ಲ. ಬಿಜೆಪಿಯ ತತ್ವ ಸಿದ್ಧಾಂತಗಳನ್ನ ಒಪ್ಪಿ ನಾವೆಲ್ಲ ಬಿಜೆಪಿ ಸೇರಿದ್ದೇವೆ. ಜೀವನ ಪರ್ಯಂತ ಬಿಜೆಪಿಯಲ್ಲೇ ಇರುತ್ತೇವೆ ಎಂದು ಟಾಂಗ್ ನೀಡಿದರು.

Key words: Statement – CM -Change -Minister -Bhairati Basavaraju –tong- Siddaramaiah.