ನಾಳೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್…

ಬೆಂಗಳೂರು, ಜನವರಿ,7,2021(www.justkannada.in): ವಂಚಕ ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆಗೆ ಹಾಜರಾಗಲು ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ನೀಡಿದೆ.jk-logo-justkannada-mysore

ಆರೋಪಿ ಯುವರಾಜ್‌ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಅವರಿಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.  , ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.CCB -notices -actress Radhika Kumaraswamy – attend- tomorrow- hearing.

ವಾಟ್ಸಾಪ್‌ ಮತ್ತು ಟೆಕ್ಸ್ಟ್‌ ಮೆಸೇಜ್‌ ಮೂಲಕ ಅಧಿಕಾರಿಗಳು ನಟಿ ರಾಧಿಕಾಗೆ ನೋಟಿಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ. ವಂಚನೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿತ ಯುವರಾಜ್  ಖಾತೆಯಿಂದ ಕೋಟ್ಯಾಂತರ ರೂ  ಹಣ ವರ್ಗಾವಣೆಯಾಗಿದೆ ಎಂಬ ಆರೋಪ ನಿನ್ನೆ ಕೇಳಿ ಬಂದಿತ್ತು. ಈ ಸಂಬಂಧ ನಿನ್ನೆಯೇ ಸುದ್ಧಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ, ನಮಗೆ ಯುವರಾಜ್ 15 ವರ್ಷದಿಂದ ಪರಿಚಯ. ಒಂದು ಕೋಟಿ ಹಣ ನೀಡಿಲ್ಲ. 15 ಲಕ್ಷ ಮಾತ್ರ ನೀಡಿದ್ದರು. ಸಿನಿಮಾ ವ್ಯವಹಾರಕ್ಕಾಗಿ ನೀಡಿದ್ದರು ಎಂದು ಹೇಳಿದ್ದರು.

Key words: CCB -notices -actress Radhika Kumaraswamy – attend- tomorrow- hearing.