ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ವಿರುದ್ದ ಹೇಳಿಕೆ ವಿಚಾರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮರ್ಥಿಸಿಕೊಂಡ ಸಚಿವ ಸುರೇಶ್ ಕುಮಾರ್…

Promotion

ಕೊಡಗು,ಫೆ,29,2020(www.justkannada.in) :  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಕೊಡಗು ಜಿಲ್ಲೆ ನಾಪೋಕ್ಲಿನಲ್ಲಿ ಮಾತನಾಡಿರುವ ಸಚಿವ ಸುರೇಶ್ ಕುಮಾರ್ ‘ಆಡಬಾರದ್ದು ಆಡಿದ್ರೆ ಕೇಳಬಾರದು ಕೇಳ್ಬೇಕಾಗುತ್ತೆ. ದೊರೆಸ್ವಾಮಿ ಹಿರಿಯರು. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಹುದ್ದೆ ಮತ್ತು ಹಿರಿತನವನ್ನು ಗಮನದಲ್ಲಿಟ್ಟುಕೊಂಡು ಅವರು ಮಾತನಾಡಬೇಕಾಗಿತ್ತು ಎಂದು ಹೇಳಿದರು.

ಟಿಬೆಟಿಯನ್ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ಯಾವುದೇ ಶಾಲೆಗಳಾದರೂ ಕನ್ನಡ ಕಲಿಕೆ ಕಡ್ಡಾಯ. ಈ ಬಗ್ಗೆ ನಾನು ಲಿಖಿತ ಪತ್ರ ಬರೆದಿದ್ದೇನೆ. ಕನ್ನಡ ಕಲಿಕೆ ಕಡ್ಡಾಯ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ತಿಳಿಸಿದರು.

Key words: statement- against -freedom fighter –Doreswamy- Basanagouda Patil Yatnal- Minister- Suresh Kumar