ಇಂದಿರಾ ಕ್ಯಾಂಟಿನ್ ಪುನಾರಂಭಕ್ಕೆ ಸೂಚನೆ ನೀಡಿದ ರಾಜ್ಯ ಸರ್ಕಾರ.

Promotion

ಬೆಂಗಳೂರು,ಮೇ,24,2023(www.justkannada.in):  ಹಿಂದಿನ ಸರ್ಕಾರ ಬಂದ್ ಮಾಡಿದ್ಧ ಇಂದಿರಾ ಕ್ಯಾಂಟಿನ್ ಪುನಾರಂಭ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಸೂಚನೆ ನೀಡಿದೆ.

ಈ ಕುರಿತು ಮಾತನಾಡಿದ  ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ ಪುರ, ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ , ಇರುವ ಕ್ಯಾಂಟೀನ್‌ ಗಳ ಪೈಕಿ 10 ಮೊಬೈಲ್ ಕ್ಯಾಂಟೀನ್ ಕ್ಲೋಸ್ ಆಗಿದೆ. 243 ಸ್ಥಳಗಳಲ್ಲಿ ಕ್ಯಾಂಟೀನ್ ಆರಂಭಿಸುತ್ತೇವೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕ್ಯಾಂಟೀನ್​ ಅಡುಗೆ ಕೋಣೆ ವಸ್ತುಗಳನ್ನು ರೀಪ್ಲೇಸ್ ಮಾಡಬೇಕಿದೆ ಎಂದು ತಿಳಿಸಿದರು.

ಇಂದಿರಾ ಕ್ಯಾಂಟಿನ್ ಉಪಾಹಾರ ಬೆಲೆ 5 ರಿಂದ 10 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ. ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ, ಅದು ಹಾಗೆಯೇ ಮುಂದುವರಿದಿದೆ. ಜೊತೆಗೆ ಇನ್ನು ಹಣ ಪಾವತಿಯಾಗಿಲ್ಲ ಅನ್ನೋ ದೂರು ಕೇಳಿಬಂದಿದೆ. ನಾವು ಮಾರ್ಷಲ್ಸ್‌ ನೀಡುವ ಆಧಾರದ ಮೇಲೆ ಮೊತ್ತ ಪಾವತಿ ಮಾಡಿದ್ದೇವೆ. 1 ತಿಂಗಳಲ್ಲಿ‌ ಟೆಂಡರ್, ಗುತ್ತಿಗೆದಾರರಿಗೆ ಹಳೇ ಪೇಮೆಂಟ್ ಆಗಲಿದೆ ಜಯರಾಂ ರಾಯ್‌ಪುರ ಹೇಳಿದರು.

Key words: State Govt -given notice -reopen -Indira Canteen