ಐದು ಗ್ಯಾರಂಟಿ ಜಾರಿ ಮಾಡ್ತೇವೆ: ಎಲ್ಲರಿಗೂ ತಾಳ್ಮೆ ಇರಲಿ-ಹೆಚ್.ಡಿಕೆಗೆ ಟಾಂಗ್ ನೀಡಿದ ಡಿ.ಕೆ ಸುರೇಶ್.

ಬೆಂಗಳೂರು,ಮೇ,24,2023(www.justkannada.in):  ಕಾಂಗ್ರೆಸ್ ಗ್ಯಾರಂಟಿ ಜಾರಿ ವಿಳಂಬವಾಗುತ್ತಿದೆ. ಕರೆಂಟ್ ಬಿಲ್ ಕಟ್ಟದಂತೆ ಕರೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಂಸದ ಡಿ.ಕೆ ಸುರೇಶ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಡಿ.ಕೆ ಸುರೇಶ್,  ಐದು ಗ್ಯಾರಂಟಿಗಳನ್ನ ಜಾರಿ ಮಾಡೇ ಮಾಡ್ತೇವೆ ಎಲ್ಲರಿಗೂ ತಾಳ್ಮೆ ಇರಲಿ. ಈ ರಾಜ್ಯದ ಜನರ ಆಶಯ ಈಡೇರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಹೇಳಿದ್ದಾರೆ.

ಇನ್ನು ಸಿದ್ಧರಾಮಯ್ಯ ಐದು ವರ್ಷ ಸಿಎಂ ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಎಂಬಿ ಪಾಟೀಲ್ ಗೆ ನಾನೇನು ಹೇಳಲಿ. ನಿನ್ನೆಯೇ ಹೇಳಿದ್ದೇನೆ ಎಂದರು.

Key words: implement- five guarantees-DK Suresh – former CM-HD Kumaraswamy