ಏಳು ಮಂದಿ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ.

Promotion

ಬೆಂಗಳೂರು,ಜೂನ್,30,2021(www.justkannada.in):  ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಜಯ್ ನಾಗಭೂಷಣ್ ಅವರನ್ನ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿ, ಬಿಎಂಟಿಸಿ ಎಂಡಿ ಆಗಿದ್ದ ಸಿ.ಶಿಖಾ ಅವರನ್ನ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.   ಸಲ್ಮಾ ಫಾಹಿಮಾ ಅವರನ್ನ ಮೂಲ ಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿ,  ಕಣಗವಲ್ಲಿ ಎಂ. ಅವರನ್ನ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ವರ್ಗಾವಣೆ ಮಾಡಲಾಗಿದೆ.

ರಘುನಂದನ ಮೂರ್ತಿ- ಆಯುಕ್ತರು( ಜಾರಿ) ವಾಣಿಜ್ಯ ತೆರಿಗೆ ಇಲಾಖೆ, ಅರ್ಚನಾ ಎಂ,ಎಸ್. ಸದಸ್ಯರು. ಕೆಎಟಿ. ರಮ್ಯಾ ಎಸ್ ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Key words: State government- orders- transfer – seven- IAS- officers