ಕನ್ನಡ ಕಡ್ಡಾಯ ಆದೇಶ ಕೈಬಿಟ್ಟ ರಾಜ್ಯ ಸರಕಾರ..!

ಬೆಂಗಳೂರು,ಜನವರಿ,22,2022(www.justkannada.in):   ಸ್ನಾತಕ ಪದವಿಗಳಲ್ಲಿ ಕನ್ನಡ ಭಾಷೆಯನ್ನ ಕಡ್ಡಾಯ ಆದೇಶವನ್ನ ರಾಜ್ಯ ಸರ್ಕಾರ ಕೈಬಿಟ್ಟಿದೆ.

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.  ಸರ್ಕಾರದ ಕ್ರಮ ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸಿತ್ತು. ಈ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ,  ಎಲ್ಲರಿಗೂ ಕನ್ನಡ ಕಡ್ಡಾಯಗೊಳಿಸಬಾರದು. ಕನ್ನಡ ಕಲಿತ ವಿದ್ಯಾರ್ಥಿಗಳು ಕಲಿಯಲು ಅಡ್ಡಿಯಿಲ್ಲ. ಕನ್ನಡ ಕಲಿಯಲು ಬಯಸದ ವಿದ್ಯಾರ್ಥಿಗಳಿಗೆ ಕಡ್ಡಾಯ ಬೇಡ. ಮುಂದಿನ ಆದೇಶದವರೆಗೂ ಬಲವಂತದ ಕಡ್ಡಾಯ ಬೇಡ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಕನ್ನಡ ಕಡ್ಡಾಯ ಆದೇಶ ಕೈಬಿಟ್ಟು ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರದ ಅಧೀನ ಕಾರ್ಯದರ್ಶಿ(ಉನ್ನತ ಶಿಕ್ಷಣ ಇಲಾಖೆ) ಮಹೇಶ್ ಆರ್., ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನದಲ್ಲಿ ಸ್ನಾತಕ ಪದವಿಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿರುವ ಉಲ್ಲೇಖ(1) ಮತ್ತು (2) ರ ದಿನಾಂಕ: 07-08-2021 ಮತ್ತು 15-09-2021ರ ಆದೇಶಗಳನ್ನು ಪ್ರಶ್ನಿಸಿ, ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್ ಮತ್ತಿತರರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 18156/2021 (PIL) ಅನ್ನು ದಾಖಲಿಸಿರುತ್ತಾರೆ.covid-dead-body-cancels-license-order-state-government

ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ: 16-12-2021ರಲ್ಲಿ ನೀಡಿರುವ ಮಧ್ಯಂತರ ಆದೇಶದನ್ವಯ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಯಲು ಇಚ್ಛಿಸದಿದ್ದರೆ, ಮಾನ್ಯ ನ್ಯಾಯಾಲಯದ ಅಂತಿಮ ಆದೇಶವಾಗುವವರೆಗೆ ಅದನ್ನು ಕಡ್ಡಾಯಗೊಳಿಸದಂತೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Key words: state government – abandoned – mandatory – Kannada.

ENGLISH SUMMARY…

State Govt. drops Compulsory Kannada orders
Bengaluru, January 22, 2022 (www.justkannada.in): The State Government has dropped the orders of compulsory Kannada in post-graduation courses.
Earlier, the government had issued orders mandating learning of Kannada in Colleges. The Samskruta Bharathi Karnataka Trust had submitted a PIL in the High Court questioning the government order, requesting not to make Kannada compulsory for everyone. “Students who have already learned Kannada can learn it. But it should not be made compulsory for those who won’t like to learn Kannada,” it claimed. It had ordered the State Government not to enforce Kannada compulsorily until further orders.covid-dead-body-cancels-license-order-state-government
Following this, Mahesh R., Under Secretary to the Government (Higher Education Department), has issued orders dropping the earlier order making Kannada compulsory in postgraduate courses in the implementation of the National Education Policy, 2020.
Keywords: Kannada compulsory/ post graduate courses/ State Govt./ withdraws order