ರಾಜ್ಯ ಬಿಜೆಪಿಗೆ ಹೊಸ ಸಾಮಾಜಿಕ ಮಾಧ್ಯಮ ಮುಖ್ಯಸ್ಥರ ನೇಮಕ.

Promotion

ಬೆಂಗಳೂರು, ನವೆಂಬರ್ 25, 2022 (www.justkannada.in): ರಾಜ್ಯದ ಆಡಳಿತ ಪಕ್ಷ ಬಿಜೆಪಿ ಇನ್ನು ಆರು ತಿಂಗಳಲ್ಲಿ ಚುನಾವಣೆಗಳನ್ನು ಎದುರಿಸಲಿರುವ ಕರ್ನಾಟಕಕ್ಕೆ ಪಕ್ಷದ ಯುವ ಮೋರ್ಚಾ ಕಾರ್ಯಕರ್ತರಾದ ವಿಕಾಸ್ ಪುತ್ತೂರು ಅವರನ್ನು ಪಕ್ಷದ ಸಾಮಾಜಿಕ ಮಾಧ್ಯಮದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

37 ವರ್ಷ ವಯಸ್ಸಿನ ವಿಕಾಸ್, ರಾಜ್ಯದ ಬಿಜೆಪಿಯ ಸಾಮಾಜಿಕ ಮಾಧ್ಯಮ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳಲ್ಲಿ ಹೆಚ್ಚು ಮತಗಳನ್ನು ಗಳಿಸಲು ಸಾಮಾಜಿಕ ಮಾಧ್ಯಮ ಬಹು ದೊಡ್ಡ ವೇದಿಕೆಯಾಗಿ ರೂಪಗೊಂಡಿದ್ದು, ವಿವಿಧ ಪಕ್ಷಗಳಿಗೆ ಇದು ಒಂದು ರೀತಿಯ ರಣರಂಗವಾದಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ತಮ್ಮದೇ ದಕ್ಷಿಣ ಕನ್ನಡ ಜಿಲ್ಲೆಯವರಾದ ವಿಕಾಸ್ ಅವರನ್ನು ನೇಮಕ ಮಾಡಿದ್ದಾರೆ.

“ಬರುವ ಚುನಾವಣೆಗಳು ನಮಗೆ ಒಂದು ಸವಾಲಾಗಿದೆ. ನಮ್ಮಲ್ಲಿ ಹಾಲಿ ಮೂಲಸೌಕರ್ಯವಿದ್ದು, ಹೆಚ್ಚು ಮುಖ್ಯವಾಹಿನಿಗೊಳಿಸಬೇಕಾಗಿದೆ,” ಎಂದು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ವಿಕಾಸ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವಿಕಾಶ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ವಕ್ತಾರರೂ ಆಗಿದ್ದಾರೆ.

ವಿಕಾಸ್ ಅವರ ಮುಂದಾಳತ್ವದಲ್ಲಿ ಪಕ್ಷವು ಬೂತ್ ಮಟ್ಟದಲ್ಲಿ ಮತದಾರರೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸಲಿದೆ. “ಪ್ರತಿ ಬೂತ್‌ ನಲ್ಲಿ ನಾವು ಕನಿಷ್ಠ ೨೫% ಮತದದಾರರೊಂದಿಗೆ ನೇರ ಸಂಪರ್ಕವನ್ನು ಹೊಂದುವ ನಿರೀಕ್ಷೆ ಇಟ್ಟುಕೊಂಡಿದ್ದು, ಇದಕ್ಕಾಗಿ ಒಂದು ಚಾನೆಲ್‌ ಅನ್ನು ನಿರ್ಮಿಸಬೇಕಾಗಿದೆ,” ಎಂದು ವಿಕಾಸ್ ಅವರು ತಿಳಿಸಿದರು.

ಕರ್ನಾಟಕ ಬಿಜೆಪಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಹು ದೊಡ್ಡ ಪ್ರಮಾಣದ ಅಭಿಮಾನಿಗಳಿದ್ದಾರೆ.  ಟ್ವಿಟ್ಟರ್‌ ನಲ್ಲಿ ೪.೫೨ ಲಕ್ಷ, ಫೇಸ್‌ಬುಕ್‌ ನಲ್ಲಿ ೯.೪೦ ಲಕ್ಷ ಹಾಗೂ ಇನ್‌ ಸ್ಟಾಗ್ರಾಂನಲ್ಲಿ ೫೩,೦೦೦ ಫಾಲೋರ್ಸ್  ಇದ್ದಾರೆ.

“ರಚನಾತ್ಮಕ ವಿಷಯವಸ್ತು ನೀಡುವುದು ನಮ್ಮ ಗಮನಕೇಂದ್ರಿತ ವಿಷಯವಾಗಿದೆ. ನಾವು ನಮ್ಮ ಸರ್ಕಾರಗಳು ನೀಡಿರುವ ವಿವಿಧ ಯೋಜನೆಗಳನ್ನು ಜನರಿಗೆ ತೋರಿಸುವ ಕೆಲಸವನ್ನು ಹಾಗೂ ನಮ್ಮ ಪಕ್ಷ ಜನರಿಗಾಗಿ ಏನು ಮಾಡಿದೆ ಎಂಬುದನ್ನು ತೋರಿಸುವ ಕೆಲಸವನ್ನು ಮುಂದುವರೆಸುತ್ತೇವೆ,” ಎಂದು ವಿಕಾಸ್ ತಿಳಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: State –BJP- appoints- new- social media chief