ಸಾವಿರಾರು ಜನರಿಂದ ಟಿಕೆಟ್ ಗೆ ಅರ್ಜಿ: ಕಾಂಗ್ರೆಸ್ ಗೆ ಜನಬೆಂಬಲ  ಎಂಬುದಕ್ಕೆ ಸಾಕ್ಷಿ- ಸಂಸದ ಡಿ.ಕೆ ಸುರೇಶ್.

ಬೆಂಗಳೂರು,ನವೆಂಬರ್,25,2022(www.justkannada.in):  ಕಾಂಗ್ರೆಸ್ ದಿವಾಳಿಯಾಗಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕರ ವಿರುದ್ಧ ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್,  ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಟಿಕೆಟ್ ಗಾಗಿ ಆಕಾಂಕ್ಷಿಗಳಿದ್ದಾರೆ. ಸಾವಿರಾರು ಜನರು ಟಿಕಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ನಮಗೆ ಜನ ಬೆಂಬಲವಿರುವುದಕ್ಕೆ ಸಾಕ್ಷಿ ಎಂದು ಟಾಂಗ್ ನೀಡಿದರು.

ಸಿಎಂ ಕ್ಷೇತ್ರದಲ್ಲೇ 51 ಜನ ಅರ್ಜಿ ಸಲ್ಲಿಸಿದ್ದಾರೆ.  ಸಿಎಂ ಆಡಳಿತದ ವಿರುದ್ದ ಜನ ದಂಗೆ ಏಳುತ್ತಾರೆ. ಚುನಾವಣೆಗೆ ಎಲ್ಲಾ ಹಂತದ ತಯಾರಿ ನಡೆದಿದೆ ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: tickets-people -support – Congress- MP -DK Suresh.