ತಿ. ನರಸೀಪುರದಲ್ಲಿ ಮತ್ತಿಬ್ಬರು ಸ್ಟಾಫ್ ನರ್ಸ್ ಗಳಿಗೆ ಕೊರೋನಾ ಸೋಂಕು ದೃಢ…

Promotion

ಮೈಸೂರು,ಜು,28,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಕೊರೊನ ವಾರಿಯರ್ಸ್ ಗಳನ್ನ ಬೆಂಬಿಡದೆ ಕಾಡುತ್ತಿದೆ. ಈ ನಡುವೆ ತಿ. ನರಸೀಪುರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ಕಂಡು ಬರುತ್ತಿದೆ.jk-logo-justkannada-logo

ಇಂದುತಿ. ನರಸೀಪುರದಲ್ಲಿ  ಮತ್ತಿಬ್ಬರು ಸ್ಟಾಫ್ ನರ್ಸ್ ಗಳಿಗೆ ಕೊರೊನ ಸೋಂಕು ಕಾಣಿಸಿಕೊಂಡಿದೆ. ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ರ್ಯಾಪಿಡ್ ಟೆಸ್ಟ್ ನಲ್ಲಿ  ಇಬ್ಬರು ಸ್ಟಾಫ್ ನರ್ಸ್ ಗಳಿಗೆ ಸೋಂಕು ಇರುವುದು ದೃಢವಾಗಿದೆ.staff-nurses-t-narasipura-corona-mysore

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 50 ಮಂದಿಗೆ ಟೆಸ್ಟ್  ಮಾಡಲಾಗಿತ್ತು. ಸೋಂಕಿತ ಇಬ್ಬರು ನರ್ಸ್ ಗಳು ಸೋಂಕಿತ ಮಹಿಳಾ ವೈದ್ಯೆಯ ಪ್ರಾಥಮಿಕ  ಸಂಪರ್ಕದಲ್ಲಿದ್ದರು. ಈ ಮೂಲಕ ತಿ.ನರಸೀಪುರ ತಾಲೂಕಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

 

Key words: Staff nurses –T. Narasipura-corona-mysore