“ssp.postmatric.karnataka.gov.in ಎಲ್ಲಾ ಸ್ಕಾಲರ್ ಶಿಪ್ ಗೂ ಏಕೈಕ ಜಾಲತಾಣ” : ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು,ಮಾರ್ಚ್,14,2021(www.justkannada.in) :  ವಿದ್ಯಾರ್ಥಿಗಳು DCET ಬಗ್ಗೆ ಕೇಳಿದ ಪ್ರಶ್ನೆಗಳ ವಿಚಾರವಾಗಿ ಕೆಲವು ಅಂಶಗಳು 2020-21ನೇ ಸಾಲಿಗೆ, ರಾಜ್ಯ ಪೋಸ್ಟ್ ಮೆಟ್ರಿಕ್ ಸ್ಕಾಲರ್ ಶಿಪ್ ಅರ್ಜಿಯನ್ನು ssp.postmatric.karnataka.gov.in ಜಾಲತಾಣದಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

jkಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸದರಿ ಜಾಲತಾಣವು, SC, ST, OBC, Minority, Technical Education, Medical Education  ಸೇರಿದಂತೆ ಎಲ್ಲಾ ಸ್ಕಾಲರ್ ಶಿಪ್ ಗೂ ಏಕೈಕ ಜಾಲತಾಣವಾಗಿದ್ದು, ಹೆಚ್ಚಿನ ಮಾಹಿತಿಯನ್ನು ಜಾಲತಾಣದಿಂದ ಪಡೆಯಬಹುದು ಎಂದಿದ್ದಾರೆ.

ವಿದ್ಯಾರ್ಥಿಗಳ ನೈಜತೆಯನ್ನು ವಿಶ್ವಾಸಯೋಗ್ಯ(Bonafide) ಮಾಹಿತಿಯನ್ನು ಪ್ರಮಾಣಿಕರಿಸಲು ವಿದ್ಯಾರ್ಥಿಗಳ ದತ್ತಾಂಶವನ್ನು, ಅವರುಗಳು ಅಧ್ಯಯನ ಮಾಡುತ್ತಿರುವ ವಿಶ್ವವಿದ್ಯಾಲಯಗಳು ಮತ್ತು ಇಲಾಖೆಗಳಿಂದ ಪಡೆಯಲಾಗಿದೆ ಎಂದು ಹೇಳಿದರು.

ಆದ್ದರಿಂದ, ವಿದ್ಯಾರ್ಥಿಗಳು ಕಡಿಮೆ ಸಮಯದಲ್ಲಿ ಯಾವುದೇ ಹೆಚ್ಚಿನ ದಾಖಲಾತಿಗಳನ್ನು ಒದಗಿಸದೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಅಧ್ಯಯನಕ್ಕಾಗಿ ತುಂಬಿರುವ ಶುಲ್ಕ ರಸೀದಿಯನ್ನು ಮಾತ್ರ ಅಪ್‍ಲೋಡ್‍ ಮಾಡಬೇಕಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ವೃತ್ತಿಪರ ಕೋರ್ಸ್‍ಗಳಾದ ಇಂಜಿನಿಯರಿಂಗ್‍, (ಲ್ಯಾಟರಲ್‍ ಪ್ರವೇಶಾತಿ ಸೇರಿದಂತೆ-DCET), ಮೆಡಿಕಲ್‍, ಅಗ್ರಿಕಲ್ಚರ್, ನರ್ಸಿಂಗ್‍, ಪ್ಯಾರಮೆಡಿಕಲ್‍, ಫಾರ್ಮಸಿ ಮುಂತಾದ ಕೋರ್ಸ್ ಗಳಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ದತ್ತಾಂಶವನ್ನು KEAಯಿಂದ ಪಡೆಯಬೇಕು ಎಂದು ವಿವರಿಸಿದರು.

ಕೌನ್ಸಿಲಿಂಗ್‍ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ, ಮುಂದಿನ 10 ದಿನಗಳಲ್ಲಿ  ದತ್ತಾಂಶವನ್ನು reconcile ಮಾಡಿ ಜಾಲತಾಣಕ್ಕೆ ಅಳವಡಿಸಲಾಗುವುದು. ಜುಲೈ, ಆಗಸ್ಟ್ 2021 ರಲ್ಲಿ ನಡೆಯುವ DCET ಪರೀಕ್ಷೆಯ ಮುಖಾಂತರ 2021-22 ನೇ ಸಾಲಿಗೆ ಲ್ಯಾಟರಲ್‍ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಅನ್ವಯಿಸಲಿದ್ದು, ಈಗಾಗಲೇ ಡಿಸೆಂಬರ್ 2020 ರಲ್ಲಿ  ನಡೆದು ಪ್ರವಾಶಾತಿ ಪಡೆದಿರುವ DCET ಗೂ ಹಾಗೂ ಜುಲೈ,ಆಗಸ್ಟ್ 2021 ರಲ್ಲಿ ನಡೆಯುವ ಪರೀಕ್ಷೆಗೆ ಸಂಬಂಧವಿರುವುದಿಲ್ಲ ಎಂದಿದ್ದಾರೆ.

Ssp.postmatric.karnataka.gov.in-All-Scholar ship-Single-Website-DCM-Dr.C.N.Ashwaththanarayana

ಒಂದು ವೇಳೆ ವಿದ್ಯಾರ್ಥಿಯು DCET ಮುಖಾಂತರ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಕ್ಕೆ ಭರಿಸುವ ಪರೀಕ್ಷಾ ಶುಲ್ಕ ಮರುಪಾವತಿಗೆ ಸಂಬಂಧಿಸಿದ ವಿಷಯವಾಗಿದ್ದರೆ, ಈ ಸಂಬಂಧ ವಿಧ್ಯಾರ್ಥಿಗಳಿಗೆ ಪೂರಕವಾಗಿ ಕ್ರಮಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ, ಜಾಲತಾಣದಲ್ಲಿ ಆನ್‍ಲೈನ್‍ ಮುಖಾಂತರ ಅರ್ಜಿ ಸಲ್ಲಿಸಲು ದಿನಾಂಕವನ್ನು 31ನೇ ಮಾರ್ಚ್ 2021 ಕ್ಕೆ ಮರುನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

key words : Ssp.postmatric.karnataka.gov.in-All-Scholar ship-Single-Website-DCM-Dr.C.N.Ashwaththanarayana