Saturday, August 15, 2026

BDA Apartments

Home Front Page ಸಾವಯವ ‘ರೈತ ಸಂತೆ’ಗೆ ಚಾಲನೆ ನೀಡಿದ ಸಚಿವ ಯೋಗೇಶ್ವರ್

ಸಾವಯವ ‘ರೈತ ಸಂತೆ’ಗೆ ಚಾಲನೆ ನೀಡಿದ ಸಚಿವ ಯೋಗೇಶ್ವರ್

ಬೆಂಗಳೂರು, ಮಾಚ್‍ 14, 2021 (www.justkannada.in): ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಸಾವಯವ ಸಂತೆಯಲ್ಲಿ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಸಚಿವ ಯೋಗೇಶ್ವರ್  ಚಾಲನೆ ನೀಡಿದರು.

ಸಂತೆ ಎಂಬ ಪದ ಕೆಲವು ದಶಕಗಳ ಹಿಂದೆ ಎಲ್ಲರ ಮನೆ ಮಾತಾಗಿತ್ತು. ಆದರೆ, ಆಧುನಿಕತೆ ಬೆಳೆದಂತೆ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆಗಳು, ಮಾಲ್‍ಗಳು ಅಸ್ತಿತ್ವಕ್ಕೆ ಬಂದಿವೆ ಎಂದರು.

ಇತಿಹಾಸ ಮರುಕಳಿಸುವುದಿಲ್ಲ ಎಂದು ಹಲವರು ಹೇಳುತ್ತಾರೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಅದಕ್ಕೆ ಸಾವಯವ ಸಂತೆಯೇ ಬಹುದೊಡ್ಡ ಉದಾಹರಣೆಯಾಗಿದೆ ಎಂದರು.