ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ.

ಬೆಂಗಳೂರು,ಅಕ್ಟೋಬರ್,11,2021(www.justkannada.in): ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು 29,522 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಇಂದು ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದಾರೆ.  53,125 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 29,522 ವಿದ್ಯಾರ್ಥಿಗಳು ಪಾಸ್ ಆಗಿದ್ದು ಶೇ.55.54  ಫಲಿತಾಂಶ ಬಂದಿದೆ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಸೆಪ್ಟೆಂಬರ್ 27 ಹಾಗೂ 29ರಂದು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನಡೆದಿತ್ತು. ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಈ ಪರೀಕ್ಷೆಯನ್ನು ಬಹಳ ಸರಳೀಕೃತ ಮಾದರಿಯ್ಲಲಿ ನಡೆಸಲಾಗಿತ್ತು. ಒಂದು ದಿನ ಐಚ್ಛಿಕ ವಿಷಯಗಳಿಗೆ ಹಾಗೂ ಮತ್ತೊಂದು ದಿನ ಭಾಷಾ ವಿಷಯಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು.

Key words: SSLC- Supplementary -Examination -Result -announce

ENGLISH SUMMARY…

SSLC Supplementary results announced
Bengaluru, October 11,2021 (www.justkannada.in): The SSLC supplementary results have been announced. Accordingly, 29,522 students have passed.
Primary and Secondary Education Minister B.C. Nagesh today announced the SSLC supplementary results. A total number of 53,125 students had appeared for the supplementary exams. Out of them, 29,522 have passed, securing a total pass percentage of 55.54% across the state.
The SSLC supplementary exams were conducted on September 27 and 29. The exams were held in a simple way due to the COVID-19 Pandemic.
Keywords: SSLC supplementary exams/ results announced