ಎಸ್ ಎಸ್ ಎಲ್ ಸಿ ರಿಸಲ್ಟ್: ಈ ಬಾರಿ 625 ಅಂಕ ಪಡೆದ 145 ವಿದ್ಯಾರ್ಥಿಗಳು: 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ..

ಬೆಂಗಳೂರು,ಮೇ,19,2022(www.justkannada.in):  2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಪಡೆದಿದ್ದಾರೆ.

ಇಂದು ಪ್ರಾಥಮಿಕ್ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದು, 10 ವರ್ಷದಲ್ಲೇ ದಾಖಲೆಯ ಫಲಿತಾಂಶ ಬಂದಿದೆ. ಬೆಂಗಳೂರಿನ ಅನಘಂ ಎಂ ಮೂರ್ತಿ, ಬಳ್ಳಾರಿಯ ಸಿಎಸ್ ಕವನ, ದೇವನಹಳ್ಳಿ ಚೈತನ್ಯ, ಹಾಸನದ ಅರ್ಜುನ್, ಸಿರಸಿಯ ಚಿರಾಗ್,  ಆಕೃತಿ   ಸೇರಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. 624 ಅಂಕಗಳನ್ನು 309 ವಿದ್ಯಾರ್ಥಿಗಳು,  623 ಅಂಕಗಳನ್ನು 422 ವಿದ್ಯಾರ್ಥಿಗಳು, 622 ಅಂಕಗಳನ್ನು 615 ವಿದ್ಯಾರ್ಥಿಗಳು, 621 ಅಂಕಗಳನ್ನು 706 ವಿದ್ಯಾರ್ಥಿಗಳು, 620 ಅಂಕವನ್ನು 704 ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ.

40061 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ನಿಂದ ಪಾಸ್ ಆಗಿದ್ದು,   ಸರ್ಕಾರಿ ಶಾಲೆಗಳಲ್ಲಿ ಶೇ.88 ಅನುದಾನಿತ ಶಾಲೆಗಳಲ್ಲಿ 87.84 ಫಲಿತಾಂಶ ಬಂದಿದೆ.   20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

ಈ ಬಾರಿ ಯಾವ ಜಿಲ್ಲೆ ಮೊದಲು ಯಾವ ಜಿಲ್ಲೆ ಲಾಸ್ಟ್ ಎನ್ನುವ ವಿಂಗಡಣೆ ಇಲ್ಲ. ಶಾಲೆಗಳಿಗೆ ಗ್ರೇಡ್ ವೈಸ್ ಫಲಿತಾಂಶದ ವಿವರವನ್ನು ನೀಡಲಾಗಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಫಲಿತಾಂಶ ಘೋಷಣೆಯಾದ ನಂತರ, karresults.nic.in ಮತ್ತು sslc.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕು.

Key words: SSLC-Result- 145 students – scored -625 marks: