ರಾಷ್ಟ್ರಪತಿಗಳಿಂದ ಅ.10ರಂದು ಶ್ರೀ ವಿಧ್ಯಾಕೀರ್ತನ ಸುಧಾಲಹರಿ” ಸಂಸ್ಕರಣ ಗ್ರಂಥಮಾಲೆ ಲೋಕಾರ್ಪಣೆ-ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿಕೆ…

Promotion

ಮೈಸೂರು,ಅ,5,2019(www.justkannada.in): ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಶತಮಾಮೋತ್ಸವ ಹಿನ್ನಲೆ, ಅಕ್ಟೋಬರ್ 10 ರಂದು “ಶ್ರೀ ವಿಧ್ಯಾಕೀರ್ತನ ಸುಧಾಲಹರಿ” ಸಂಸ್ಕರಣ ಗ್ರಂಥಮಾಲೆ ಲೋಕಾರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದದೇವಿ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಬರೆದಿರುವ ಕೀರ್ತನೆಗಳ ಶ್ರೀ ವಿಧ್ಯಾಕೀರ್ತನ ಸುಧಾಲಹರಿ” ಸಂಸ್ಕರಣ ಗ್ರಂಥಮಾಲೆಯನ್ನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಗ್ರಂಥ ಲೋಕಾರ್ಪಣೆಯಾಗಲಿದೆ. ಮೈಸೂರು ಅರಮನೆಯ ದರ್ಬಾರ್ ಹಾಲ್ ನಲ್ಲಿ ರಾತ್ರಿ 7.30ಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಂಯೋಜಿಸಿರುವ ಜಯಸಂವರ್ಧಿನಿ ರಾಗದಲ್ಲಿ ಕೀರ್ತನೆ ಹಾಡಿಸಲಾಗುವುದು. ಕನ್ನಡ ಮತ್ತು ದೇವನಾಗರಿ ಭಾಷೆಯಲ್ಲಿ ಭಾಷೆಯಲ್ಲಿ ಹೊರತರಲಾಗಿರುವ ಪುಸ್ತಕ ಇದಾಗಿದೆ ಎಂದು ಮಾಹಿತಿ ನೀಡಿದರು.

ಹಾಗೆಯೇ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ  22 ಎಕರೆ ಭೂಮಿಯನ್ನು ಜೆ.ಎಸ್.ಎಸ್ ಯೂನಿವರ್ಸಿಟಿಗೆ ನೀಡಲಾಗಿದೆ. ಅಕ್ಟೋಬರ್  10 ರಂದು ಅದೇ ಜಾಗದಲ್ಲಿ  ಜೆ.ಎಸ್.ಎಸ್ ವಿಶ್ವವಿದ್ಯಾನಿಲಯದ ಕ್ಯಾಂಪಸ್  ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಶತಮಾಮೋತ್ಸವ ಹಿನ್ನೆಲೆ, ಅ.13  ರಂದು ಖ್ಯಾತ ಗಾಯಕ ರಘುದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅರಮನೆ ಆವರಣದಲ್ಲಿ ಕಾರ್ಯಕ್ರಮ  ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಜಂಬೂಸವಾರಿ ದಿನದಂದು ಯದುವೀರ್  ಅವರು ಪಾಲ್ಗೊಳ್ಳುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಮೋದಾ ದೇವಿ ಒಡೆಯರ್, ಜಂಬೂಸವಾರಿ ದಿನದಂದು ಯದುವೀರ್ ಭಾಗವಹಿಸಲಿದ್ದಾರೆ. ಈಗಾಗಲೇ ಮುಖ್ಯಮತ್ರಿಗಳು ಆಹ್ವಾನ ನೀಡಿದ್ದಾರೆ. ಹಾಗಾಗಿ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಯದುವೀರ್ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

Key words: Sri Vidyarkeerthan Sudhalahari –release-President-october –pramodadevi wodeyar