ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಜಯಂತಿ ಮಹೋತ್ಸವ ಹಿನ್ನೆಲೆ: ಮೈಸೂರು ಮೃಗಾಲಯಕ್ಕೆ ಒಂದು ಲಕ್ಷ ರೂ. ಚೆಕ್ ನೀಡಿದ ಸುತ್ತೂರು ಮಠ….

ಮೈಸೂರು,ಆ,28,2019(www.justkannada.in): ನಾಳೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 104ನೇ ಜಯಂತಿ ಮಹೋತ್ಸವ ಹಿನ್ನೆಲೆ ಮೈಸೂರು ಮೃಗಾಲಯದ ಪ್ರಾಣಿಗಳ  ಆಹಾರ ವೆಚ್ಚಕ್ಕಾಗಿ ಸುತ್ತೂರು ಮಠ ಒಂದು ಲಕ್ಷ ರೂ. ನ  ಚೆಕ್ ನೀಡಿದೆ.

ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಕುಲಕರ್ಣಿ ಗೆ ಚೆಕ್ ಹಸ್ತಾಂತರ ಮಾಡಲಾಯಿತು. ಇನ್ನು ನೆರೆ ಹಾವಳಿ ಹಿನ್ನಲೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಜಯಂತಿಯನ್ನ ಸರಳವಾಗಿ ಆಚರಿಸಲು ನಿರ್ಧಾರ ಮಾಡಲಾಗಿದೆ. ಜಯಂತಿ ಆಚರಣೆಯ ಬದಲು 50 ಲಕ್ಷ ಹಣವನ್ನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸುತ್ತೂರು ಮಠ ನೀಡಿದೆ.

ಆಗಸ್ಟ್ 29ರಂದು(ನಾಳೆ)  ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಜಯಂತಿಯನ್ನ ನಾಳೆ ಸರಳವಾಗಿ ಆಚರಿಸಲು ನಿರ್ಧಾರ ಮಾಡಲಾಗಿದೆ. ಈ ಭಾರಿ ನೆರೆ ಹಾವಳಿಹಿನ್ನೆಲೆಯಲ್ಲಿ ಶ್ರೀಗಳಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ.

ಈ ಕುರಿತು ಮಾತನಾಡಿದ ಶ್ರೀಗಳ  ಸಹಾಯಕ ನಿರ್ದೇಶಕ  ನಿರಂಜನ್ ಕುಮಾರ್ , ನೆರೆಯಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಯಂತಿಗೆ ವೆಚ್ಚವಾಗುವ ಹಣವನ್ನು ನೆರೆ ಸಂತ್ರಸ್ಥರಿಗೆ ಈಗಾಗಲೆ ನೀಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಗಾಲಯದ ಪ್ರಾಣಿಗಳಿಗೆ ಒಂದು ದಿನದ ಆಹಾರಕ್ಕಾಗಿ ಶ್ರೀ ಮಠದಿಂದ ಒಂದು ಲಕ್ಷ ಚೆಕ್ ನೀಡಲಾಗಿದೆ. ಪ್ರಾಣಿ ಪ್ರಿಯರಾದ ಶ್ರೀಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.

Key words: Sri Shivaratri Rajendra Swamiji- Jayanti-Mysore Zoo -1 lakh-Check –suttur math