ಎಸ್.ಆರ್ ಪಾಟೀಲ್ ಆಯ್ಕೆಗೆ ವಿರೋಧ ಮಾಡಿಲ್ಲ-  ಮಾಜಿ ಸಚಿವ ಎಂ.ಬಿ ಪಾಟೀಲ್.

Promotion

ಬೆಂಗಳೂರು,ಮೇ,23,2022(www.justkannada.in):  ವಿಧಾನ ಪರಿಷತ್ ಚುನಾವಣೆ ಟಿಕೆಟ್ ಲೆಕ್ಕಾಚಾರ ಕಾವೇರಿದ್ದು ಇಂದು ರಾತ್ರಿ ಕಾಂಗ್ರೆಸ್ ಟಿಕಟ್ ಘೋಷಣೆ ಮಾಡುವುದಾಗಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಹೇಳಿದ್ದಾರೆ.

ಈ ನಡುವೆ ಕಾಂಗ್ರೆಸ್ ಎಸ್.ಆರ್ ಪಾಟೀಲ್ ಅವರು ಕಾಂಗ್ರೆಸ್ ಟಿಕೆಟ್ ನ ರೇಸ್ ನಲ್ಲಿದ್ದು, ಇವರ ಆಯ್ಕೆಗೆ ವಿರೋಧವಿದೆ ಎಂಬ ಮಾತುಗಳು ಕೇಳಿ ಬಂದಿದೆ.  ಈ ಕುರಿತು ಮಾತನಾಡಿರುವ ಮಾಜಿ ಸಚಿವ ಎಂ.ಬಿ ಪಾಟೀಲ್, ಎಸ್ ಆರ್ ಪಾಟೀಲ್ ಆಯ್ಕೆಗೆ ವಿರೋಧ ಮಾಡಿಲ್ಲ. ನಾನ್ಯಾಕೆ ಎಸ್ ಆರ್ ಪಾಟೀಲ್ ಆಯ್ಕೆಗೆ ವಿರೋಧ ಮಾಡಲಿ.  ವಿರೊಧ ಮಾಡುವ ಪ್ರಶ್ನೆಯೇ ಇಲ್ಲ. ಸಭೆಗೆ ನನ್ನನ್ನು ಕರೆದು ಚರ್ಚೆಯೂ ಮಾಡಿಲ್ಲ. ನಾನು ಯಾರ ಪರವೂ ಅಲ್ಲ ಯಾರ ವಿರುದ್ದವೂ ಅಲ್ಲ ಎಂದು ತಿಳಿಸಿದ್ದಾರೆ.

Key words: SR Patil-not-opposed-selection-Former Minister-MB Patil.