ಪ್ರೀತಿಸಿ ಮದುವೆಯಾದ ವಿಶೇಷ ಜೋಡಿ : ‘’ಕೆಫೆಯೊಂದರ ಪ್ರೇಮಕಥೆ’’…!

Promotion

ಬೆಂಗಳೂರು,ನವೆಂಬರ್,19,2020(www.justkannada.in) : ಪ್ರೀತಿಗೆ ಹಣ, ಅಂತಸ್ಥು, ಸೌಂದರ್ಯ, ಜಾತಿ,ಧರ್ಮ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿಸುವ ಎರಡು ಹೃದಯಗಳ ಒಪ್ಪಿಗೆಯಷ್ಟೇ ಅಂತಿಮ ಎಂಬುದಕ್ಕೆ ಹೀಗೊಂದು ವಿಶೇಷ ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ.kannada-journalist-media-fourth-estate-under-lossಉದ್ಯಾನ ನಗರಿಯ ಕೋರಮಂಗಲದ ಸೋಮೇಶ್ವರ ದೇವಸ್ಥಾನದಲ್ಲಿ ಇಬ್ಬರು ಕುಬ್ಜರು ತಮ್ಮ ಸ್ನೇಹಿತರ ಹಾಗೂ ಕುಟುಂಬಸ್ಥರ ಸಮಕ್ಷಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಖಾಸಗಿ ಕೆಫೆಯೊಂದರಲ್ಲಿ ಪ್ರೀತಿ ಆರಂಭ

Special,Couple,Married,Love,love,story,cafe
ಕೃಪೆ : ಟಿವಿ9

ಬೈರಪ್ಪ ಹಾಗೂ ರೂಪಾ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ಮೂಲತಃ ಕೊಪ್ಪಳ ಮೂಲದ ಬೈರಪ್ಪ ಹಾಗೂ ಬೆಳಗಾವಿ ಮೂಲದ ರೂಪಾ ಖಾಸಗಿ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡ ಬೈರಪ್ಪ ಹಾಗೂ ರೂಪಾ ಪ್ರೀತಿಸಿ ಮದುವೆಯಾಗಿದ್ದಾರೆ.

ಇವರಿಬ್ಬರ ಲವ್ ಕಂ ವೆಡ್ಡಿಂಗ್ ಸ್ಟೋರಿಗೆ ಸಾಕ್ಷಿಯಾದ ಕೆಫೆ ಮಾಲೀಕರೆ ಖುದ್ದು ನಿಂತು ಮದುವೆ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ.

Special,Couple,Married,Love,love,story,cafe
ಕೃಪೆ : ಟಿವಿ9

key words ; Special-Couple-Married-Love-love-story-cafe