ಅದಷ್ಟು ಬೇಗ ಸಲಾಂ ಹೆಸರಿನ ಮಂಗಳಾರತಿ ನಿಲ್ಲಲಿ- ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಆಗ್ರಹ.

Promotion

ಬೈಂದೂರು,ಮಾರ್ಚ್,29,2022(www.justkannada.in): ಕೊಲ್ಲೂರು ಮೂಕಾಂಬಿಕೆಗೆ ನಡೆಯುವ ಸಲಾಂ ಹೆಸರಿನ ಮಂಗಳಾರತಿ ನಿಲ್ಲಿಸುವಂತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಆಗ್ರಹಿಸಿದ್ದಾರೆ.

ಬೈಂದೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕಲ್ಲಡ್ಕ ಪ್ರಭಾಕರ್, ಟಿಪ್ಪು ನಮ್ಮ ದೇವರನ್ನ ಅವಹೇಳನ ಮಾಡಿದ್ದಾನೆ. ನಮ್ಮ ಸಮಾಜವನ್ನು ನಾಶ ಮಾಡಲು ಹೊರಟಿದ್ದ. ಹೀಗಾಗಿ  ವ್ಯಕ್ತಿ ಹೆಸರಲ್ಲಿ ಪೂಜೆ ಮಾಡುವುದು ಸರಿಯಲ್ಲ ಅದು ದೇವರಿಗೆ ಮಾಡಿದ ಅಪಮಾನ.

ಅದ್ದರಿಂದ ಹೀಗೆ ಆದ್ರ ಅಲ್ಲಾಹು ಸಲಾಂ ಅಂತಾ ಬರುವ ಸಾಧ್ಯತೆ ಇದೆ. ಆದಷ್ಟು ಬೇಗ ಸಲಾಂ ಮಂಗಳಾರತಿ ನಿಲ್ಲಲಿ  ದೇವರ ಹೆಸರಿನಲ್ಲಿ ಪೂಜೆ ನಡೆಯಲಿ. ನಮ್ಮ ದೇವಸ್ಥಾನದಲ್ಲಿ ನಮ್ಮತನ ಇರಬೇಕು ಎಂದು ಕಲ್ಲಡ್ಕ ಪ್ರಭಾಕರ್ ತಿಳಿಸಿದ್ದಾರೆ.

Key words: Soon -Salam – stop-RSS leader -Kalladka Prabhakar