ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ- ಬಿಜೆಪಿ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ.

ಬೆಂಗಳೂರು,ಮಾರ್ಚ್,28,2022(www.justkannada.in): ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ  ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್. ಈಗಿನಿಂದಲೇ ಕಾಂಗ್ರೆಸ್ ಮನೆ ಮನೆ ಪ್ರಚಾರ ಕೈಗೊಳ್ಳಲಿದೆ . ಎಂಬಿ ಪಾಟೀಲ್ ನೇತೃತ್ವದಲ್ಲೇ ನೇತೃತ್ವದಲ್ಲಿ ಪ್ರಚಾರ ಶುರು ಮಾಡುತ್ತೇವೆ ಎಂದರು.

ಎಲ್ಲಾ ಜಾತಿ ಹಿಂದೂಗಳು ಒಂದೇ. ಇಲ್ಲಿ ಬಿಜೆಪಿ  ಜಾತಿ ಧರ್ಮದ ಮೇಲೆ ಒಡೆಯುವ ಕೆಲಸ  ಮಾಡುತ್ತಿದೆ. ಉಪಚುನಾವಣೆಯಲ್ಲಿ ಹಾನಗಲ್ ನಲ್ಲಿ ನಾವು ಗೆದ್ದವು. ಸ್ಥಳೀಯ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆದ್ದಿದ್ದೇವೆ. ಹೀಗಾಗಿ ಜನರ ಒಲವು ನಮ್ಮ ಕಡೆ ಇದೆ ಎಂದರು.

ಬಿಜೆಪಿ ಈಗ ಭಗವದ್ಗೀತೆ ವಿಚಾರ ಪ್ರಸ್ತಾಪಿಸಿದೆ.  ಕೆಂಗಲ್ ಹನುಮಂತಯ್ಯ 2 ರೂ.ಗೆ ಭಗವದ್ಗೀತೆ ಹಂಚಿದ್ರು. ಬಿಜೆಪಿಗರು ಕಣ್ಬಿಡುವ ಮುನ್ನ ಭಗವದ್ಗೀತೆಯನ್ನ ತೋರಿಸಿದ್ದವು.  ರಾಮಾಯಣ ಮಹಾಭಾರತ ತೋರಿಸಿದ್ದು ರಾಜೀವ್ ಗಾಂಧಿ ಎಂದು ನುಡಿದರು.

Key words: congress-kpcc-president-DK Shivakumar