ಶೀಘ್ರದಲ್ಲೇ ಸಚಿವ ಸಂಪುಟ ಪುನರಚನೆ ಮಾಡ್ತೇವೆ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ…

Promotion

ಬೆಂಗಳೂರು,ಫೆ,6,2020(www.justkannada.in): ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು ನೂತನ 10 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಸಚಿವಸಂಪುಟ ಪುನರಚನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸುಳಿವು ನೀಡಿದ್ದಾರೆ.

10 ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಳಿಕ ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶೀಘ್ರದಲ್ಲೇ ಸಚಿವ ಸಂಪುಟ ಪುನರಚನೆ ಮಾಡ್ತೇವೆ. ಪಕ್ಷ  ಮತ್ತು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧರಿಸಿದಂತೆ 10ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಇಂದು ಸಚಿವ ಸ್ಥಾನ ಸಿಗದವರಿಗೆ ಮುಂದೆ ಸ್ಥಾನ ಸಿಗಲಿದೆ. ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ನುಡಿದರು.

10 ಶಾಸಕರ ಜತೆಗೆ ಮೂರು ಮೂಲಕ ಬಿಜೆಪಿಗರು ಸಚಿವರಾಗಿ ಇಂದು ಪ್ರಮಾಣ ವಚನಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಸಮಾಧಾನ ತೀವ್ರಗೊಂಡ ಹಿನ್ನೆಲೆ, ನಿನ್ನೆ ಬಿಜೆಪಿ ಹೈಕಮಾಂಡ್ ತಮ್ಮ ನಿರ್ಧಾರವನ್ನ ಬದಲಿಸಿ 10 ಮಂದಿ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿ ಎಂದು ಸಿಎಂ ಬಿಎಸ್ ವೈಗೆ ಸೂಚನೆ ನೀಡಿತ್ತು.ಹೀಗಾಗಿ ಮೂರು ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಕೈತಪ್ಪಿದ್ದು ಮುಂದೆ ಏನಾಗುತ್ತೆ ಕಾದು ನೋಡಬೇಕಿದೆ.

Key words: soon -restructuring – Cabinet-Statement – BJP state President -Nalin Kumar Katil.