ಸಚಿವ ಸ್ಥಾನ ಸಿಗದ ಹಿನ್ನೆಲೆ: ಶಾಸಕ ಮಹೇಶ್ ಕುಮುಟಳ್ಳಿ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಫೆ,6,2020(www.justkannada.in):  ಉಪಚುನಾವಣೆಯಲ್ಲಿ ಗೆದ್ದ 11 ಜನರ ಪೈಕಿ 10 ಮಂದಿ ನೂತನ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದು ತಮಗೆ ಸಚಿವ ಸ್ಥಾನ  ಸಿಗದಿರುವ ಬಗ್ಗೆ ಪ್ರತಿಕ್ರಿಯಸಿರುವ ಶಾಸಕ ಮಹೇಶ್ ಕುಮುಟಳ್ಳಿ,  ನನಗೆಮಂತ್ರಿ ಸ್ಥಾನ ನೀಡದಿದ್ದರೂ ಟೆನ್ಷನ್ ಇಲ್ಲ. ಆದರೆ ಸ್ವಲ್ಪ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಮಹೇಶ್ ಕುಮುಟಳ್ಳಿ, ನನಗೆ ಗೌರವಯುತವಾದ ಸ್ಥಾನ ಸಿಗುವ ವಿಶ್ವಾಸವಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಇರುತ್ತೇನೆ. ಸಿಎಂಗೆ ಸಮಸ್ಯೆ ಬಂದಿರಬಹುದು.  ಹೀಗಾಗಿ ಮಂತ್ರಿ ಸ್ಥಾನ ನೀಡಿಲ್ಲ ಎಂದರು.

ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಲ್ಲ. ನನ್ನನ್ನ ಮಂತ್ರಿ ಮಾಡಿದರಲು ಕಾರಣವೇನು ಎಂದು ಹೇಳಿಲ್ಲ. ಸಮಸ್ಯೆ ಹೇಳಲು ಸಿಎಂಗೆ ಕಷ್ಟ ಆಗಿರಬಹುದು. ಈ ಸಂಬಂಧ ಕಾಲ ಕೂಡಿ ಬಂದಾಗ ಹೈಕಮಾಂಡ್ ಭೇಟಿ ಮಾಡುತ್ತೇನೆ ಎಂದು ಮಹೇಶ್ ಕುಮುಟಳ್ಳಿ ತಿಳಿಸಿದರು.

Key words: ministerial position-mla-Mahesh Kumutalli -reaction