6 ವರ್ಷದ ಬಳಿಕ ತಾಯಿಯ ಮಡಿಲು ಸೇರಿದ ಮಗ.

ಬೆಂಗಳೂರು,ಮಾರ್ಚ್,12,2022(www.justkannada.in):  ತಾಯಿ ಸಂತೆಗೆ ಹೋಗಿ ತರಕಾರಿ ಮಾರುತ್ತಿದ್ದ ವೇಳೆ  ದಿಢೀರ್ ನಾಪತ್ತೆಯಾಗಿದ್ಧ ಮಗ ಮತ್ತೆ ಇದೀಗ 6 ವರ್ಷದ ಬಳಿಕ ತಾಯಿ ಮಡಿಲು ಸೇರಿದ್ದಾನೆ.

ಬೆಂಗಳೂರಿನ 6 ವರ್ಷದ ಬಳೀಕ ಭರತ್ ಎಂಬಾತ ತನ್ನ ತಾಯಿ ಪಾರ್ವತಮ್ಮನ ಬಳಿ ಸೇರಿದ್ದಾನೆ.    ಪಾರ್ವತಮ್ಮ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದರು.  ಆ ತಾಯಿಗೆ, ಇದ್ದದ್ದು ಒಬ್ಬನೇ ಮಗ ಆತನ ಹೆಸರು ಭರತ್. ಆತನಿಗೆ ಮಾತು ಕೂಡ ಬರುತ್ತಿರುಲ್ಲ. ಈ ನಡುವೆ 2016ರ ಮಾರ್ಚ್ ನಲ್ಲಿ ಯಲಹಂಕದ ರೈತ ಸಂತೆಗೆ  ಮಗನನ್ನ ಕರೆದುಕೊಂಡು ಹೋಗಿ ತರಕಾರಿ ಮಾರುತ್ತಿದ್ದ ವೇಳೆ ಮಗ ಭರತ್ ನಾಪತ್ತೆಯಾಗಿದ್ದನು.

ಆಗಿನಿಂದಲೂ ಪಾರ್ವತಮ್ಮ ಮಗನಿಗಾಗಿ ಹುಡುಕಾಡುತ್ತಿದ್ದರು. ಅಲ್ಲದೇ ಮಗ ಕಿಡ್ನಾಪ್ ಆದ ಬಗ್ಗೆ ಯಲಹಂಕ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.  ಆದರೆ ಇದೀಗ 6 ವರ್ಷದ ಬಳಿಕ, ಅದೇ ಮಗ ಈಗ ತಾಯಿಯ ಮಡಿಲು ಸೇರುವಂತೆ ಆಗಿದೆ.

ಇನ್ನು  ಸಂತೆಯಿಂದ ತಪ್ಪಿಸಿಕೊಂಡು ಹೋದ  ಭರತ್ ರೈಲು ಮೂಲಕ ನಾಗ್ಬುರ ಸೇರಿದ್ದನು. ರೈಲ್ವೆ ನಿಲ್ದಾಣದಲ್ಲಿ ಓಡಾಡುತ್ತಿದ್ದ ಪೊಲೀಸರು ಆತನನ್ನು ರಕ್ಷಿಸಿ, ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿಯೇ ಆಶ್ರಯದ ಮೂಲಕ ಬದುಕನ್ನು ಕಟ್ಟಿಕೊಂಡಿದ್ದನು.

ಪುನರ್ವಸತಿ ಕೇಂದ್ರದ ಅಧಿಕಾರಿಗಳು ಮೂಗನಾಗಿದ್ದ ಆತನಿಗೆ ಆಧಾರ್ ಕಾಡ್ ಮಾಡಿಸೋದಕ್ಕಾಗಿ, ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ, ಮಾಹಿತಿ ನೀಡಿ, ಬಂದಿದ್ದಾರೆ. ಆದರೆ ಅವರು ಸಲ್ಲಿಸಿದ್ಧ ಹೊಸ ಆಧಾರ್ ಕಾರ್ಡ್ ರಿಜೆಕ್ಟ್ ಆಗಿತ್ತು.

ಇದಕ್ಕೆ ಕಾರಣವೇನು ಎಂಬುದಾಗಿ ಪುನರ್ವಸತಿ ಕೇಂದ್ರದವರು ಆಧಾರ್ ಸೇವಾ ಕೇಂದ್ರದವರನ್ನು ಕೇಳಿದಾಗ, ಇವರ ದತ್ತಾಂಶದಲ್ಲಿ ಈಗಾಗಲೇ ಬಿ ಭರತ್ ಎಂದು ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಇದೆ ಎಂದು ತಿಳಿಸಿದ್ದಾರೆ. ಅಲ್ಲದೇ ಭರತ್ ಕುಮಾರ್ ತಾಯಿಯ ಮೊಬೈಲ್ ಸಂಖ್ಯೆ ಕೂಡ ನೀಡಿದ್ದಾರೆ.

ಕೂಡಲೇ ಅಧಿಕಾರಿಗಳು ಆ  ಸಂಖ್ಯೆಗೆ ಕರೆ ಮಾಡಿ, ಮಾಹಿತಿ ಪಡೆದಿದ್ದಾರೆ. ಜೊತೆಗೆ ಈ ಬಗ್ಗೆ ಯಲಹಂಕದ ಠಾಣೆ ಪೊಲೀಸರನ್ನು ಸಂಪರ್ಕಿಸಿದಾಗ, ಭರತ್ ಕುಮಾರ್ ಕಿಡ್ನಾಪ್ ಪ್ರಕರಣ ದಾಖಲಾಗಿರುವ ಬಗ್ಗೆ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ. ಜೊತೆಗೆ ಭರತ್ ಕುಮಾರ್ ತಾಯಿಯನ್ನು ನಾಗ್ಬುರಕ್ಕೆ ಪೊಲೀಸರೊಂದಿಗೆ ಕಳುಹಿಸಿಕೊಟ್ಟು ನೆರವಾಗಿದ್ದಾರೆ. ನಾಗ್ಪುರದ ಪುನರ್ ವಸತಿ ಕೇಂದ್ರಕ್ಕೆ ತೆರಳಿದ ಭರತ್ ತಾಯಿ ಪಾರ್ವತಮ್ಮ, ಮಗನನ್ನು ಕಂಡು ಭಾವುಕರಾದರು.

Key words:  son –mother- after- 6 years