ಮೈಸೂರಿನಲ್ಲಿ ‘ಲಾಕ್’ ಆಗಿದ್ದ ನಟಿ‌ ಭಾರತಿ ವಿಷ್ಣುವರ್ಧನ್ ಮರಳಿ ಬೆಂಗಳೂರಿಗೆ ಹಿಂದಿರುಗಿದ್ದು ಹೇಗೆ ಗೊತ್ತಾ?!

Promotion

ಮೈಸೂರು, ಏಪ್ರಿಲ್ 16, 2020 (www.justkannada.in): ಮೈಸೂರಿಗೆ ಆಗಮಿಸಿ ಲಾಕ್ ಡೌನ್ ನಲ್ಲಿ‌ ಸಿಲುಕಿಕೊಂಡಿದ್ದ ಹಿರಿಯ ನಟಿ ಭಾರತಿ‌‌ ವಿಷ್ಣುವರ್ಧನ್ ಅವರು ಬೆಂಗಳೂರಿಗೆ ಹಿಂದಿರುಗಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ನೆರವಾಗಿದ್ದಾರೆ.

ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಅವರು ಲಾಕ್ ಡೌನ್ ಆಗುವ ಮೊದಲೇ ಮೈಸೂರಿಗೆ ಆಗಮಿಸಿದ್ದರು. ಲಾಕ್ ಡೌನ್ ಪರಿಣಾಮವಾಗಿ ಬೆಂಗಳೂರಿಗೆ ತೆರಳಲು ಸಾಧ್ಯವಾಗಿರಲಿಲ್ಲ. ವಾಹನ ಬೆಂಗಳೂರಲ್ಲೇ ಬಿಟ್ಟು ಬಂದಿದ್ದರಿಂದ ವಾಪಸ್ ಬರಲು ಸಾಧ್ಯವಾಗಿರಲಿಲ್ಲ.

ಅಗತ್ಯ ಔಷಧಿಗಳು ಖಾಲಿಯಾಗುತ್ತಾ ಬಂದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಗಮನಕ್ಕೆ ತಂದರು. ಮಾನವೀಯತೆಯ ದೃಷ್ಟಿಯಿಂದ ತಕ್ಷಣವೇ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು ಅಗತ್ಯ ಪಾಸ್, ವಾಹನ ವ್ಯವಸ್ಥೆ ಮಾಡಿಸಿ, ಡಾ. ಭಾರತಿ ವಿಷ್ಣುವರ್ಧನ್ ಬೆಂಗಳೂರಿಗೆ ಬರಲು ನೆರವಾಗಿದ್ದಾರೆ.