ಸಾಮಾಜಿಕ ಮತ್ತು ಭೌಗೋಳಿಕ ಎಲ್ಲವನ್ನು ಪರಿಶೀಲಿಸಿ ಎಂಎಲ್ ಸಿ ಟಿಕೆಟ್ – ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್..

social-geographical-mlc-tickets-bjp-president-nalin-kumar-kateel
Promotion

ಕಲ್ಬುರ್ಗಿ,ಜೂ,11,2020(www.justkannada.in):  ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು ಈ ಹಿನ್ನೆಲೆ ಬಿಜೆಪಿಯಿಂದ ಸಾಮಾಜಿಕ ಮತ್ತು ಭೌಗೋಳಿಕ ಎಲ್ಲವನ್ನು ಪರಿಶೀಲಿಸಿ ಎಂಎಲ್ ಸಿ ಟಿಕೆಟ್ ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಹೇಳಿದರು.

ಕಲಬುರಗಿ ಜಿಲ್ಲೆಯ  ಸೇಡಂ ಪಟ್ಟಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ವಿಭಾಗ ಮಟ್ಟದ ಕಾರ್ಯಾಗಾರ ನಡೆಯಿತು. ಕಲಬುರಗಿ, ಬೀದರ್,ಯಾದಗಿರಿ, ರಾಯಚೂರ್ ಜಿಲ್ಲೆಯ ಪದಾಧಿಕಾರಿಗಳು ಭಾಗಿಯಾಗಿದ್ದರು. ಪಕ್ಷ ಸಂಘಟನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.social-geographical-mlc-tickets-bjp-president-nalin-kumar-kateel

ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ಸಂಘಟನಾತ್ಮಕ ಕೆಲಸದ ಬಗ್ಗೆ ವಿಭಾಗ ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಭಾರತ ತೆಗೆದುಕೊಂಡ ನಿರ್ಧಾರಗಳನ್ನು ಇಡೀ ವಿಶ್ವವೆ ಮೆಚ್ಚಿಕೊಂಡಿದೆ. ಆಹಾರ ಇಲ್ಲದೆ ಯಾರು ಸತ್ತಿಲ್ಲ.ರಾಹುಲ್ ಗಾಂಧಿ ರಾಜಕಾರಣಿಕ್ಕಾಗಿ ಮಾತನಾಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಿದೆ. ಪಕ್ಷ ಹೇಗೆ ವಿಭಿನ್ನವಾಗಿ ಚಿಂತಿಸುತ್ತದೆ ಅನ್ನೋದಕ್ಕೆ ಇದು ಉದಾಹರಣೆ. ವಿಧಾನ ಪರಿಷತ್ ನಲ್ಲಿ ಕೂಡಾ ಏನಾಗುತ್ತೋ ಅಂತ ಕಾಯ್ದು ನೋಡಿ. ಸಾಮಾಜಿಕ ಮತ್ತು ಭೌಗೋಳಿಕ ಎಲ್ಲವನ್ನು ಪರಿಶೀಲಿಸಿ ಎಂಎಲ್ ಸಿ ಟಿಕೆಟ್ ನೀಡಲಾಗುವದು ಎಂದು ತಿಳಿಸಿದರು.

Key words: social –geographical- MLC- tickets-BJP President- Nalin Kumar Kateel.