ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್‌ ಗೆ  ಸುಪ್ರೀಂಕೋರ್ಟ್ ನಿಂದ ಮಧ್ಯಂತರ ಜಾಮೀನು.

ಗುಜರಾತ್, ಸೆಪ್ಟೆಂಬರ್,2, 2022 (www.justkannada.in): ಸರ್ವೋಚ್ಛ ನ್ಯಾಯಾಲಯ ಇಂದು, ಗುಜರಾತ್ ರಾಜ್ಯದಲ್ಲಿ 2002ರಲ್ಲಿ ನಡೆದಂತಹ ಗಲಭೆಗಳಿಗೆ ಸಂಬಂಧಪಟ್ಟಂತೆ ಪ್ರಕರಣಗಳನ್ನು ದಾಖಲಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ಜೂನ್ 26 ರಿಂದ ಬಂಧನದಲ್ಲಿರುವಂತಹ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್‌ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.  ಉಚ್ಛ ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾಗುವವರೆಗೂ ತನ್ನ ಪಾಸ್‌ಪೋರ್ಟ್  ಅನ್ನು ಒಪ್ಪಿಸುವಂತೆ ಸೂಚನೆ ನೀಡಿದೆ.

ಆಕೆಯ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ತೀಸ್ತಾ ಅವರಿಗೆ ಸ್ಥಳೀಯವಾಗಿ ಯಾರೂ ಜಾಮೀನು ನೀಡಲು ಮುಂದಕ್ಕೆ ಬರುವುದಿಲ್ಲ ಎಂದು ವಾದ ಮಂಡಿಸಿದ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಪೀಠವು ಭದ್ರತೆಯಾಗಿ ನಗದನ್ನು ಒಪ್ಪಿಕೊಳ್ಳಲು ಅನುಮತಿಸಿತು.

ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿ ಎಸ್. ರವೀಂದ್ರ ಭಟ್  ಹಾಗೂ ನ್ಯಾಯಮೂರ್ತಿ ಸುಧಂನ್ಷು ಧುಲ್ಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ತೀಸ್ತಾ ಅವರು ೨ ತಿಂಗಳಿಂದ ಬಂಧನದಲ್ಲಿರುವ ಮಹಿಳೆಯಾಗಿದ್ದು, ತಪಾಸಣಾ ಪ್ರಾಧಿಕಾರಿಗಳಿಗೆ ಇವರ ವಿಚಾರಣೆ ನಡೆಸಲು ೭ ದಿನಗಳ ಕಾಲಾವಕಾಶ ಲಭಿಸಿದೆ. ಆಕೆಯ ವಿರುದ್ಧ ಇರುವ ಆರೋಪಗಳು ೨೦೦೨ಕ್ಕೆ ಸೇರಿದ್ದು, ೨೦೧೨ರವರೆಗಿನ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿತು.

ಸುದ್ದಿ ಮೂಲ: ಲೈವ್ ಲಾ

Key words: Social activist -Teesta Setalvad -granted -interim bail – Supreme Court.