Sunday, September 13, 2026

BDA Apartments

ದೇಶದಲ್ಲಿ ಒಂದೇ ದಿನ 17,092 ಮಂದಿಗೆ ಕೋವಿಡ್ ಸೋಂಕು ದೃಢ BDA JK_Adv BDA Adv
Home Front Page ದೇಶದಲ್ಲಿ ಒಂದೇ ದಿನ 17,092 ಮಂದಿಗೆ ಕೋವಿಡ್ ಸೋಂಕು ದೃಢ.

ದೇಶದಲ್ಲಿ ಒಂದೇ ದಿನ 17,092 ಮಂದಿಗೆ ಕೋವಿಡ್ ಸೋಂಕು ದೃಢ.

ನವದೆಹಲಿ,ಜುಲೈ,2,2022(www.justkannada.in): ದೇಶದಲ್ಲಿ ಕೋವಿಡ್ ಏರಿಳಿತ ಮುಂದುವರೆದಿದ್ದು, ಒಂದೇ ದಿನದಲ್ಲಿ  17,092 ಮಂದಿಗೆ  ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 17,092 ಮಂದಿ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 29 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 5,25,168ಕ್ಕೆ  ಏರಿಕೆಯಾಗಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,95,68ಕ್ಕೆ ಏರಿಕೆಯಾಗಿದೆ. ಕೋವಿಡ್  ಪಾಸಿಟಿವಿಟಿ ದರ ಶೇ.4.14ರಷ್ಟಿದ್ದು, ಒಂದೇ ದಿನದಲ್ಲಿ 9,09,776 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.  ಕಳೆದ 24 ಗಂಟೆಗಳಲ್ಲಿ 14,668ಮಂದಿ ಗುಣಮುಖರಾಗಿರುವುದರಿಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,28,51,590ಕ್ಕೆ ಏರಿಕೆಯಾಗಿದೆ.

Key words: single day- 17,092 – Covid-case- country.