ಸಾರ್ವಜನಿಕರಿಗೆ ಗುಡ್ ನ್ಯೂಸ್: ಮುಡಾದಲ್ಲಿನ ನಿವೇಶನ ಶಾಖೆಯ ಕೆಲಸ ಕಾರ್ಯಗಳು ಸರಳೀಕರಣ.

Promotion

ಮೈಸೂರು,ಫೆಬ್ರವರಿ,8,2022(www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಿವೇಶನ ಶಾಖೆಯ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸರಳೀಕರಣಗೊಳಿಸುವ ಕುರಿತು ಮುಡಾ ಆದೇಶ ಹೊರಡಿಸಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಿವೇಶನ ಶಾಖೆಗೆ ಸಂಬಂಧಿಸಿದಂತೆ ಇ-ಖಾತೆ / ಖಾತೆ ನೊಂದಣಿ, ಖಾತೆ ವರ್ಗಾವಣೆ, ಪೌತಿ ಖಾತೆ ವರ್ಗಾವಣೆ, ಕ್ರಯದ ಮೂಲಕ ಖಾತೆ ವರ್ಗಾವಣೆ, ಕ್ರಯ ಪತ್ರ ನೊಂದಣಿ ಆದೇಶಗಳನ್ನು ತಹಸೀಲ್ದಾರ್‌ರಿಂದ ಅನುಮೋದನೆಗಾಗಿ ಕಾರ್ಯದರ್ಶಿಯವರಿಗೆ ಸಲ್ಲಿಸಲಾಗುತ್ತಿದೆ. ಈ ಕಾರಣದಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನಗತ್ಯ ವಿಳಂಬವಾಗುತ್ತಿದೆ ಎಂದು ಅನೇಕ ಸಾರ್ವಜನಿಕರು ದೂರುತ್ತಿದ್ದರು.

ಈ ಹಿನ್ನೆಲೆಯಲ್ಲಿ ಪ್ರಾಧಿಕಾರದಲ್ಲಿನ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವ ಹಿತದೃಷ್ಟಿಯಿಂದ ಈ ಹಿಂದೆ ಇ-ಖಾತೆ / ಖಾತೆ ನೊಂದಣಿ, ಖಾತೆ ವರ್ಗಾವಣೆ, ಪೌತಿ ಖಾತೆ ವರ್ಗಾವಣೆ, ಕ್ರಯದ ಮೂಲಕ ಖಾತೆ ವರ್ಗಾವಣೆ, ಕ್ರಯ ಪತ್ರ ನೊಂದಣಿ ಆದೇಶಗಳನ್ನು ತಹಸೀಲ್ದಾರ್ ರವರ ಹಂತದಲ್ಲಿಯೇ ಕ್ರಮವಹಿಸಲಾಗುತ್ತಿತ್ತು. ಅದರಂತೆಯೇ ಇನ್ನು ಮುಂದೆ ನಿವೇಶನ ಶಾಖೆಯಲ್ಲಿನ ಮೇಲಿನ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಕಾರ್ಯದರ್ಶಿಯವರ ಆದೇಶದ ಬದಲಿಗೆ ತಹಸೀಲ್ದಾರ್ ರವರ ಹಂತದಲ್ಲಿಯೇ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

Key words: Simplification –work- Muda