ರೋಹಿಣಿ ವರ್ಗಾವಣೆಗೆ ಭೂ ಮಾಫಿಯ ಕಾರಣ : ತನಿಖೆಗೆ ಸಿದ್ದರಾಮಯ್ಯ ಆಗ್ರಹ.

Promotion

 

ಬೆಂಗಳೂರು, ಜೂ.08, 2021 : (www.justkannada.in news ) ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಐಎಎಸ್ ಅಧಿಕಾರಿಗಳ ನಡುವಣ ಕಿತ್ತಾಟಕ್ಕೆ ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಭೂ ಹಗರಣ ಕಾರಣ ಎನ್ನಲಾಗುತ್ತಿದೆ. ಆದ್ದರಿಂದ ಈ ಹಗರಣದ ಬಗ್ಗೆ ಸರಕಾರ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿಂದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಹೇಳಿದಿಷ್ಟು..

jk

ಮೈಸೂರು ಮಹಾ ನಗರ ಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಮತ್ತು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ನಡುವಣ ಜಗಳಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಶಾಸಕರು ಹಾಗೂ ಜೆಡಿಎಸ್‍ ಶಾಸಕ ಸಾ.ರಾ. ಮಹೇಶ್ ಕಾರಣ. ಮೊದಲಿಗೆ ಒರ್ವ ಐಎಎಸ್ ಅಧಿಕಾರಿಯನ್ನು ಬಿಜೆಪಿಯವರು ಬೆಂಬಲಿಸಿದರು. ಅದರಲ್ಲೂ ಸಂಸದ ಪ್ರತಾಪ್ ಸಿಂಹ, ಮೊದಲು ಡಿಸಿ ರೋಹಿಣಿ ಸಿಂಧೂರಿ ಪರ ಇದ್ದರು. ಬಳಿಕ ದಿಢೀರನೆ ವಿರೋಧ ಮಾಡಲು ಶುರು ಮಾಡಿದರು. ಇದೇ ವೇಳೆ ಮತ್ತೊರ್ವ ಐಎಎಸ್ ಅಧಿಕಾರಿ ಶಿಲ್ಪನಾಗ್ ರನ್ನು ಹೊಗಳಲು ಶುರು ಮಾಡಿದರು.

ಆ ಮೂಲಕ ಈ ಇಬ್ಬರು ಐಎಎಸ್ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದವರೇ ಬಿಜೆಪಿ ಸಂಸದ, ಶಾಸಕರು. ಇಂಥ ಸಂದರ್ಭದಲ್ಲಿ ಜಿಲ್ಲಾ ಮಂತ್ರಿ ಸೋಮಶೇಖರ್ ಏನು ಮಾಡುತ್ತಿದ್ದರು. ಇದು ಅವರ ವೈಫಲ್ಯ ಅಲ್ಲವೇ ? ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿ ಕರೆದು ಮಾತನಾಡಲು ಅಧಿಕಾರಿಗೆ ಅನುಮತಿ ನೀಡಿದವರು ಯಾರು ? ಅನುಮತಿ ಇಲ್ಲದೆ ಪತ್ರಿಕಾಗೋಷ್ಠಿ ಕರೆಯಲು ಅವಕಾಶ ಇಲ್ಲ. ವರ್ಗಾವಣೆ ಶಿಕ್ಷೆ ಅಲ್ಲ. ಸರಕಾರ ಈ  ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ, ಸರಕಾರವೇ ಶಕ್ತಿ ಕಳೆದುಕೊಂಡಿದೆ. ಆಡಳಿತವೇ ಇಲ್ಲದಂತೆ ಆಗಿರುವುದರಿಂದ ಅಧಿಕಾರಿಗಳು ಬೀದಿಗೆ ಬರಲು ಕಾರಣ ಎಂದರು.

‘ ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ’ ಎಂದು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಆ ಹಗರಣದ ಯಾವುದು ಎಂಬ ಬಗ್ಗೆ ತನಿಖೆ ಆಗಬೇಕು. ಯಾವ ಯಾವ ರಾಜಕಾರಣಿಗಳ ಭೂ ಹಗರಣಗಳಿವೆ. ಈ ವಿಷಯದಲ್ಲಿ ಯಾರ್ಯಾರು ಅಧಿಕಾರಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದರು ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಒತ್ತಾಯಿಸಿದರು.

ಶಿಲ್ಪನಾಗ್ ಡಿಸಿ ಮಾಡಲು ಯತ್ನಿಸಿದ್ದರು:

ಬಿಜೆಪಿಯ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಅವರನ್ನು ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯನ್ನು ಬಿಜೆಪಿ ನಾಯಕರು ಬಹಿರಂಗವಾಗಿಯೇ ಟೀಕಿಸುತ್ತಾ, ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪನಾಗ್ ರನ್ನು ಮಾತುಮಾತಿಗೂ ಹೊಗಳಿ ಅಟ್ಟಕ್ಕೇರಿಸುತ್ತಿದ್ದದ್ದೇ ಇದಕ್ಕೆ ಸಾಕ್ಷಿ. ಈ ಷಡ್ಯಂತ್ರ ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು. ಅವರ ನಡುವೆ ಮನಸ್ತಾಪ ತಂದಿಟ್ಟರು.

siddaramaiha-karnataka-grama.panchayath-election-postpone-siddu-oppose-cm

ಬಿಗಿಯಾದ ಸರಕಾರ ಇಲ್ಲದೇ ಇದ್ದರೆ ಈ ರೀತಿಯ ಅನಾಹುತಗಳಿಗೆ ದಾರಿ ಆಗುತ್ತದೆ. ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಆಗಿದೆ ರಾಜ್ಯ ಸರಕಾರದ ಪರಿಸ್ಥಿತಿ ಎಂದು ಲೇವಡಿ ಮಾಡಿದರು.

ರಾಜಕಾರಣಿಗಳು ಅಧಿಕಾರಿಗಳನ್ನು ಬೆಂಬಲಿಸುವ ಅಥವಾ ವಿರೋಧಿಸುವ ಕೆಲಸ ಮಾಡಬಾರದು. ಅವರನೇದಿದ್ದರು ಜನಪರ ಕಾರ್ಯಗಳನ್ನು ಮಾತ್ರ ಮಾಡಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

 

ENGLISH SUMMARY :

Land mafia reason behind transfer of Mysuru DC Rohini Sindhuri: Former CM Siddaramaiah demands probe.

 

Bengaluru : Former Chief Minister and leader of opposition Siddaramaiah alleged that the reason behind the differences between the two duty-bound IAS officers in Mysuru is the land mafia that has taken place in Mysuru and hence has demanded a probe.
He spoke to the press persons at his Bengaluru residence. “BJP MP Pratap Simha, MLA and JDS leader Sa. Ra. Mahesh is the real reason behind the differences and war of words between the two IAS officers Shilpa Nag, Commissioner, Mysore City Corporation, and former Mysuru Deputy Commissioner Rohini Sindhuri. At first, the BJP leaders supported one IAS officer. Especially Pratap Simha was in full support of DC Rohini Sindhuri. But all of a sudden he started opposing her and started appreciating another IAS officer Shilpa Nag. Thus, it was the BJP leaders who provoked both of them against each other. But what was the District In-charge Minister Somashekar doing? Is it not his failure?” he questioned.
“Who permitted the officer to address the press meet? There is no chance to address a press meet without anybody’s permission. A transfer is not a punishment. The State Government should take action against both of them. But it doesn’t have the nerve. Non-existence of administration is the reason behind all this,” he added.
Further, he also mentioned the outgoing DC Rohini Sindhuri’s last statement that the land mafia was the reason for her transfer. In that case, a detailed probe is necessary to find out how many land scams have taken place and who is behind them. Everything should be exposed, he demanded.

Key words: Former CM Siddaramaiah/ land mafia/ Mysuru former DC Rohini Sindhuri/ MCC Commissioner/ Shilpa Nag/ BJP leaders/ criticize