ಅಸ್ತಿತ್ವ ತೋರಿಸಲು ಸಿದ್ಧರಾಮೋತ್ಸವ: ಡಿಕೆಶಿ ದುಃಖಕ್ಕೆ ತೇಪೆ ಹಾಕಲು ‘ಕೈ’ ಹೈಕಮಾಂಡ್  ಮುಂದಾಗಿದೆ- ನಳೀನ್ ಕುಮಾರ್ ಕಟೀಲ್ ಟೀಕೆ.

Promotion

ಹಾಸನ,ಜುಲೈ,9,2022(www.justkannada.in):  ಸಿದ್ಧರಾಮಯ್ಯ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಸಿದ್ಧರಾಮೋತ್ಸವ ಕಾರ್ಯಕ್ರಮದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಹಾಸನದಲ್ಲಿ ಮಾತನಾಡಿರುವ ನಳೀನ್ ಕುಮಾರ್ ಕಟೀಲ್, ಅಸ್ತಿತ್ವ ತೋರಿಸಲು ಸಿದ್ದರಾಮೋತ್ಸವ ಆಚರಣೆ ಮಾಡಲಾಗುತ್ತಿದೆ. ಡಿಕೆ ಶಿವಕುಮಾರ್ ದುಃಖಕ್ಕೆ ತೇಪೆ ಹಾಕಲಿ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.  ಮುಂದೆ ಕಾಂಗ್ರೆಸ್ ಎರಡು ಹೋಳಾಗಲಿದೆ. ಬಿಜೆಪಿ ದ್ವೇಷದ ರಾಜಕಾರಣ ಮಾಡಲ್ಲ. ಲೋಕಾಯುಕ್ತ ಹಲ್ಲು ಕಿತ್ತಿದ್ದು ಸಿದ್ಧರಾಮಯ್ಯ ಎಂದು ಕಿಡಿಕಾರಿದರು.

ಇನ್ನು ಕಾಂಗ್ರೆಸ್ ಗೆ ಹೆಚ್ಚಿನ ಸೀಟು ಎಂಬ ಸಮೀಕ್ಷೆ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್,  ಸಿದ್ದರಾಮಯ್ಯ ಗುಂಪಿಗೆ ಎಷ್ಟು ಸೀಟು ಡಿಕೆ ಶಿವಕುಮಾರ್ ಗುಂಪಿಗೆ ಎಷ್ಟು ಸೀಟು ಅಂತಾ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ನಡುವಿನ ಒಳಜಗಳ ಬಹಿರಂಗವಾಗಿದೆ ಎಂದು ಲೇವಡಿ ಮಾಡಿದರು.

Key words: siddaramotsava-congress-BJP-president-Nalin kumar katil