ಮೈಸೂರು ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬಕ್ಕೆ ಐಶ್(AIISH) ವತಿಯಿಂದ ಮೂರು ದಿನಗಳ ಕಾಲ ಆರೋಗ್ಯ ಶಿಬಿರ.

ಮೈಸೂರು,ಜುಲೈ,9,2022(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH) ಕರ್ನಾಟಕ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಜುಲೈ 11ರಿಂದ ಮೂರು ದಿನಗಳ ಕಾಲ ಮೈಸೂರಿನ ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬಕ್ಕೆ ಆರೋಗ್ಯ ಶಿಬಿರವನ್ನ ಆಯೋಜಿಸಿದೆ.

ಜುಲೈ 11 ರಂದು ನಗರ ಸಶಸ್ತ್ರ ಮೀಸಲು ಪರೇಡ್ ಮೈದಾನ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮತ್ತು  ಐಶ್(AIISH) ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಅವರು ಆರೋಗ್ಯ ಶಿಬಿರವನ್ನ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮ ಉದ್ಘಾಟನೆಯ ನಂತರ, ಪರಿಣಿತ ಶ್ರವಣತಜ್ಞರು, ವಾಕ್ ಭಾಷಾ ತಜ್ಞರು ಮತ್ತು  ಸಂಸ್ಥೆ ENT ವೈದ್ಯರು  600 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು, ಶಬ್ದ, ಹೆಚ್ಚಿನ ಮಾಲಿನ್ಯ, ಮತ್ತು ಪ್ರತಿಕೂಲ ಪರಿಸರ ಪರಿಸ್ಥಿತಿಗಳನ್ನ ಎದುರಿಸುತ್ತಾರೆ. ಹೀಗಾಗಿ ಅಪಾಯವನ್ನು ಕಡಿಮೆ ಮಾಡಲು ಅವರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಗಮನಹರಿಸಬೇಕಿರುತ್ತದೆ. ಹೀಗಾಗಿ ಪೊಲೀಸ್ ಸಿಬ್ಬಂದಿಗಾಗಿ ಐಶ್(AIISH) ಉಚಿತವಾಗಿ ಆರೋಗ್ಯ ಶಿಬಿರ ಆಯೋಜಿಸಿದೆ.

Key words:  Three days- health camp -AIISH –Mysore- police