ಸಿದ್ಧರಾಮಯ್ಯ ಹರಕೆಯ ಕುರಿ: ಅವರಿಗೆ ಕೋಲಾರ್ ಸೇಫ್ ಅಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

Promotion

ಕಲ್ಬುರ್ಗಿ,ಜನವರಿ,13,2023(www.justkannada.in):  ವಿಪಕ್ಷ ನಾಯಕ ಸಿದ್ಧರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಕಲ್ಬುರ್ಗಿಯ ಕಡಣಿ ಗ್ರಾಮದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿದ‍್ಧರಾಮಯ್ಯಗೆ  ಕೋಲಾರ ಸೇಫ್ ಅಲ್ಲ. ಸಿದ್ಧರಾಮಯ್ಯ ಹರಕೆಯ ಕುರಿಯಾಗಿದ್ದಾರೆ. ನಾನು ಕೋಲಾರದಲ್ಲಿ ಸುತ್ತಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇನೆ.  ಕೋಲಾರ ಜಿಲ್ಲೆಯ ಕಾಂಗ್ರಸ್ ನಾಯಕರಿಗೆ ಮತಪಡೆಯುವ ಶಕ್ತಿಇಲ್ಲ ಅದಕ್ಕಾಗಿ ಬಲವಂತವಾಗಿ ಸಿದ್ಧರಾಮಯ್ಯರನ್ನ ನಿಲ್ಲಿಸಿದ್ದಾರೆ. ಯಾರು ಒತ್ತಡ ಹಾಕಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೇ ಹರಕೆಯ ಕುರಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸಿದ್ದರಾಮಯ್ಯರನ್ನ ದೇವರೇ ಕಾಪಾಡಬೇಕು ಎಂದರು.

ಮೀಸಲಾತಿಗೆ ಹೈಕೋರ್ಟ್ ತಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ,  ರಂಗ ಅನ್ನೋ ಹೆಸರನ್ನ ಮಂಗಮಾಡಿದ್ದಾರೆ. ಸರ್ಕಾರ ಮೂಗಿಗೆ ತುಪ್ಪ ಸವರಿಲ್ಲ. ಹಣೆ ಮೇಲೆ ಸುರಿದು ವಾಸನೆ ಬಾರದಂತೆ ಮಾಡಿದರು. ಮೀಸಲಾತಿ ವಿಚಾರದಲ್ಲಿ ಸರ್ಕಾರ ದೋಖಾ ಮಾಡಿದೆ ಎಂದು ಕಿಡಿಕಾರಿದರು.

Key words: Siddaramaiah-sheep- Kolar -not safe – Former CM- HD Kumaraswamy.